ವಿದ್ಯುತ್‌ ಅವಘಡಕ್ಕೆ ಹತ್ತು ಬೈಕ್ ಭಸ್ಮ

0
11
ಬೆಂಕಿ

ದಾವಣಗೆರೆ: ವಿದ್ಯುತ್‌ ಅವಘಡದಿಂದ 10 ಬೈಕ್‌ಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಹೊನ್ನಾಳಿಯ ಟಿ.ಬಿ.ವೃತ್ತದಲ್ಲಿ ನಡೆದಿದೆ. ಗುರುವಾರ ರಾತ್ರಿ ಹೊನ್ನಾಳಿ ಟಿ.ಬಿ.ವೃತ್ತದಲ್ಲಿ ಜಲೀಲದ ಅವರಿಗೆ ಸೇರಿದ್ ಗ್ಯಾರೇಜ್‌ನಲ್ಲಿ ಈ ಅವಘಡ ಸಂಭವಿಸಿದೆ.
ಕೆಲಸದ ಬಳಿಕ ಮಾಲೀಕ ಗ್ಯಾರೇಜ್ ಬಾಗಿಲು ಬಂದ್‌ ಮಾಡಿಕೊಂಡು ಹೋಗಿದ್ದು, ಈ ಸಂದರ್ಭ ಕರೆಂಟ್ ಹೋಗಿತ್ತು. ನಂತರ ಕರೆಂಟ್ ಬಂದಾಗ ಈ ದುರ್ಘಟನೆ ಸಂಭವಿಸಿದೆ. ಅಗ್ನಿ ಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಅಗಮಿಸಿವ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಲೋಕಾಯುಕ್ತ ಬಲೆಗೆ ಹರಿಹರ ನಗರಸಭೆ ಸದಸ್ಯೆ
Next articleಕಾಂಗ್ರೆಸ್ ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದೆ