ಕೈಗಾರಿಕೋದ್ಯಮಿಗಳ ವಲಸೆ ಚಿಂತನೆ ಸರಿಯಲ್ಲ: ಸತೀಶ ಜಾರಕಿಹೊಳಿ

0
14

ಬೆಳಗಾವಿ: ಒಂದು ವಾರದ ಒಳಗಾಗಿ ವಿದ್ಯುತ್ ದರ ಇಳಿಕೆಯಾಗದೆ ಇದ್ದರೆ ಮಹಾರಾಷ್ಟ್ರಕ್ಕೆ ವಲಸೆ ಹೋಗುವುದಾಗಿ ಬೆಳಗಾವಿ ಕೈಗಾರಿಕೋದ್ಯಮಿಗಳು ಹೇಳುವುದು ಸರಿಯಲ್ಲ, ಈ ವಿಚಾರವಾಗಿ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ರಾಜ್ಯದಲ್ಲಿ ವಿದ್ಯುತ್ ಬೆಲೆ ಏರಿಕೆಯ ಸಮಸ್ಯೆ ತಾತ್ಕಾಲಿಕ. ಅದನ್ನು ಶೀಘ್ರವೇ ಪರಿಹರಿಸಲಾಗುವುದು. ಕೈಗಾರಿಕೋದ್ಯಮಿಗಳು ಅಂತಹ ಚಿಂತನೆಯನ್ನು ಕೈ ಬಿಡಬೇಕು. ಒಂದು ಕೈಗಾರಿಕೆ ಸ್ಥಾಪಿಸಲು ಕನಿಷ್ಟ ೫ರಿಂದ ೧೦ ವರ್ಷ ಬೇಕು. ಅದಕ್ಕೆ ಸಾಕಷ್ಟು ಪರಿಶ್ರಮ, ವೆಚ್ಚವನ್ನೂ ಮಾಡಬೇಕು. ಇದ್ದಕ್ಕಿದ್ದಂತೆಯೇ ಒಂದು ದಿನದಲ್ಲಿ ಕೈಗಾರಿಕೆಗಳನ್ನು ಮಹಾರಾಷ್ಟ್ರಕ್ಕೆ ವಲಸೆ ಕೊಂಡು ಹೋಗೋಕೆ ಅದೇನು ಕಾಕಾ ಅಂಗಡಿಯೇ? ಡಬ್ಬಾ ಅಂಗಡಿಯೇ ಎಂದವರು ಪ್ರಶ್ನಿಸಿದರು.
ರಾಜ್ಯದಲ್ಲಿ ವಿದ್ಯುತ್ ಸರಬರಾಜು ಮಂಡಳಿಗಳು ವಿದ್ಯುತ್ ಬಿಲ್ ಹೆಚ್ಚಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾವ ಆಧಾರದಲ್ಲಿ ಬಿಲ್‌ಗಳನ್ನು ಎರಡು-ಮೂರು ಪಟ್ಟು ಹೆಚ್ಚಿಸುತ್ತಿದ್ದಾರೆ ಎಂಬುದು ನಮಗೆ ನಿಖರವಾಗಿ ತಿಳಿದಿಲ್ಲ ವಿದ್ಯುತ್ ಬೆಲೆ ಏರಿಕೆ ನಿಯಮಿತ ಪ್ರಕ್ರಿಯೆ. ವಿದ್ಯುತ್ ನಿಯಂತ್ರಣ ಆಯೋಗವು ಏಪ್ರಿಲ್‌ನಲ್ಲಿ ಹೆಚ್ಚಳಕ್ಕೆ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. ಬಹುಶಃ ಚುನಾವಣೆಯ ಕಾರಣದಿಂದ ದರ ಏರಿಕೆ ತಕ್ಷಣಕ್ಕೆ ಜಾರಿಯಾಗಿರಲಿಲ್ಲ. ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲೇ ವಿದ್ಯುತ್ ಸಮಸ್ಯೆ ಇದೆ. ಬೆಲೆ ಏರಿಕೆಯ ಸಮಸ್ಯೆ ತಾತ್ಕಾಲಿಕ. ಅದನ್ನು ಪರಿಹರಿಸಲಾಗುವುದು ಎಂದರು.

Previous articleಜಿಲ್ಲಾಡಳಿತ ಭವನದಲ್ಲಿ ರಾಡ್ ಬಳಸಿ ವ್ಯಕ್ತಿಯಿಂದ ದಾಳಿ
Next article‘ಮಂಜುನಾಥನ ಕೃಪೆಯಿಂದ ಸಮಸ್ಯೆಗಳಿಂದ ಪಾರಾಗಿ ಬರುತ್ತೇನೆ’