ಬಸ್ ಚಾಲನೆ ಮಾಡಿ ಗಮನ ಸೆಳೆದ ಸಚಿವ

0
40

ದಾವಣಗೆರೆ: ಹೈಸ್ಕೂಲ್ ಮೈದಾನದಲ್ಲಿರುವ ತಾತ್ಕಾಲಿಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯಡಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಚಾಲನೆ ನೀಡಿದರು.
ದಾವಣಗೆರೆಯಿಂದ ಹರಿಹರಕ್ಕೆ ತೆರಳುವ ಬಸ್‌ನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಚಾಲನೆ ಮಾಡುವ ಮೂಲಕ ಶಕ್ತಿ ಯೋಜನೆಯನ್ನು ಉದ್ಘಾಟಿಸಿದರು. ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಮಹಿಳೆಗೆ ಟಿಕೆಟ್ ನೀಡಿದರು.
ದಾವಣಗೆರೆ ವಿಭಾಗದಲ್ಲಿ ಮೂರು ಘಟಕಗಳಿಂದ ಪ್ರತಿದಿನ ಒಟ್ಟು 386 ಬಸ್‌ಗಳು ಸಂಚರಿಸುತ್ತಿವೆ. ಪ್ರತಿ ನಿತ್ಯ 1.50 ಲಕ್ಷ ಕಿ.ಮೀ. ಕ್ರಮಿಸಿ 1.25 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ಒದಗಿಸಲಾಗಿದೆ. ದಾವಣಗೆರೆಯಿಂದ ಹರಿಹರಕ್ಕೆ ತೆರಳುವ ಬಸ್‌ನ್ನು ಶೃಂಗರಿಸಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Previous articleಹುಬ್ಬಳ್ಳಿ-ಧಾರವಾಡದಲ್ಲಿ ಶಕ್ತಿ ಯೋಜನೆಗೆ ಚಾಲನೆ
Next articleಉಡುಪಿಯಲ್ಲಿ ಶಕ್ತಿ ಯೋಜನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಚಾಲನೆ