ಉತ್ತರಪ್ರದೇಶ: ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಯುಪಿಯ ಕೌಶಂಬಿಯ ಭಾರ್ವರಿ ರೈಲು ನಿಲ್ದಾಣದ ಬಳಿ ನಡೆದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಸೀಲ್ದಾಹ್‌ನಿಂದ ಅಜ್ಮೀರ್‌ಗೆ ಹೋಗುತ್ತಿದ್ದ (ರೈಲು ಸಂಖ್ಯೆ 12987) ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.