ಬಳ್ಳಾರಿ: ಶಾಲೆಯೊಂದರಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಶಾಲಾ ಸಿಬ್ಬಂದಿ ಮುನ್ನೆಚ್ಚರಿಕೆಯಿಂದ ಭಾರಿ ಅನಾಹುತ ತಪ್ಪಿದೆ.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದ ಸುದೀಕ್ಷಾ ಇಂಟರ್ನ್ಯಾಷನಲ್ ಶಾಲೆಯಲ್ಲಿ ಈ ಅವಘಡ ನಡೆದಿದೆ.
ಶಾಲೆಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾದ್ದರಿಂದ ಜನರೇಟರ್ ಆನ್ ಮಾಡಲಾಗಿತ್ತು. ಆಗ ಜನರೇಟರ್ ಕೊಠಡಿಯಲ್ಲಿ ಮೊದಲು ಬೆಂಕಿ ಹತ್ತಿಕೊಂಡಿದೆ. ಜನರೇಟರ್ ಕೊಠಡಿ ಹೊತ್ತಿ ಉರಿಯುತ್ತಲೇ ಶಾಲಾ ಸಿಬ್ಬಂದಿ ಶಾಲೆಯ ಒಳಗಿದ್ದ 150 ಮಕ್ಕಳನ್ನ ಹಿಂಬಾಗಿಲಿನಿಂದ ಹೊರಗಡೆ ಕಳಿಸಿ ರಕ್ಷಣೆ ಮಾಡಿದ್ದಾರೆ.