ಅಕ್ರಮ ಚಿನ್ನ ಸಾಗಾಟ: ಓರ್ವನ ಬಂಧನ

0
49

ಕಾಸರಗೋಡು: ಅಕ್ರಮ ಚಿನ್ನ ಸಾಗಾಟಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಡಿವೈಎ GVಸ್ಪಿ ಪಿ. ಬಾಲಕೃಷ್ಣನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಬೆಳಿಗ್ಗೆ ಬೇಕಲ ಸಮೀಪದ ಹೊಸಕೋಟೆ ಎಂಬಲ್ಲಿ ವಾಹನ ತಡೆದು ತಪಾಸಣೆ ನಡೆಸಿದಾಗ ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿತ್ತಾರಿಯ ನಿಝಾರ್ (೩೬) ಎಂಬಾತನನ್ನು ಬಂಧಿಸಲಾಗಿದ್ದು, ಕಾರಿನಲ್ಲಿದ್ದ ೮೫೮ ಗ್ರಾಂ ಚಿನ್ನ ವಶಪಡಿಸಿ ಕೊಳ್ಳಲಾಗಿದೆ.
ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇಳಿದು ಕಾರಿನಲ್ಲಿ ಬರುತ್ತಿದ್ದಾಗ ತಪಾಸಣೆ ನಡೆಸಲಾಗಿದ್ದು, ಬ್ಯಾಗ್‌ನಲ್ಲಿ ಎಮರ್ಜೆನ್ಸಿ ಲೈಟ್‌ನೊಳಗೆ ಬಚ್ಚಿಟ್ಟು ಚಿನ್ನ ಸಾಗಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Previous articleಲಕ್ಷ ಜನರ ಗಮನ ಸೆಳೆದ ಆ ಒಂದು ಚುಕ್ಕೆ
Next articleಹಸುಗೂಸು ಸಹಿತ ಮಕ್ಕಳಿಬ್ಬರನ್ನು ಬಿಟ್ಟು ದಂಪತಿ ನಾಪತ್ತೆ!