Home ತಾಜಾ ಸುದ್ದಿ ಸಿಡಿಲಿಗೆ 25 ಕ್ಕೂ ಹೆಚ್ಚು ಮೇಕೆಗಳ ಸಾವು

ಸಿಡಿಲಿಗೆ 25 ಕ್ಕೂ ಹೆಚ್ಚು ಮೇಕೆಗಳ ಸಾವು

0
131

ವಿಜಯಪುರ : ಸಿಡಿಲು ಬಡಿದು ಇಪ್ಪತ್ತಕ್ಕೂ ಹೆಚ್ಚು ಮೇಕೆಗಳು ಸಾವಿಗಿಡಾಗಿರುವ ದಾರುಣ ಘಟನೆ ಸಲಾದಹಳ್ಳಿಯಲ್ಲಿ ನಡೆದಿದೆ.

ದೇವರ ಹಿಪ್ಪರಗಿ ತಾಲೂಕಿನ ಸಲಾದಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ಸುರಿದ ಮಳೆಯಲ್ಲಿ ಮೇಕೆಗಳಿಗೆ ಸಿಡಿಲು ಬಡಿದಿದ್ದು, ಕುರಿಗಾಹಿಗಳಾದ ಶಂಕರಪ್ಪ ವಾಲಿಕಾರ್ ಹಾಗೂ ಪರಸಪ್ಪ ಚೌಡಕಿ ಎಂಬುವರಿಗೆ ಸೇರಿದ ಮೇಕೆಗಳು ಸಾವಿಗಿಡಾಗಿ ನಷ್ಟ ಉಂಟಾಗಿದೆ.

ಮೇಕೆಗಳ ಸಾವಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ದೇವರ ಹಿಪ್ಪರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.