ರಮೇಶ ಕತ್ತಿ ಆರೋಗ್ಯ ಏರು-ಪೇರು

0
11
ರಮೇಶ ಕತ್ತಿ

ಬೆಳಗಾವಿ: ಉಮೇಶ ಕತ್ತಿ ಅಗಲಿಕೆಯಿಂದ ಅವರ ಸೋದರ, ಮಾಜಿ ಸಂಸದ ರಮೇಶ ಕತ್ತಿಯವರ ದುಃಖದ ಕಟ್ಟೆ ಒಡೆದು ಹೋಗಿ ಆರೋಗ್ಯದಲ್ಲಿ ಏರು-ಪೇರು ಉಂಟಾಗಿರುವುದು ಕಂಡು ಬಂದಿತು.
ಪಾರ್ಥೀವ ಶರೀರವನ್ನು ಏರ್‌ಲಿಫ್ಟ್ ಮಾಡಿಸಿ ಬೆಳಗಾವಿಗೆ ತಂದು ಇಲ್ಲಿಂದ ಮೆರವಣಿಗೆ ಮೂಲಕ ಬೆಲ್ಲದ ಬಾಗೇವಾಡಿಯ ವಿಶ್ವನಾಥ ಶುಗರ್ಸ್‌ಗೆ ತಲುಪುವ ವೇಳೆಗೆ ಪೂರ್ತಿ ಕುಸಿದು ಹೋಗಿದ್ದ ರಮೇಶ ಕತ್ತಿಯವರು ಗೆಳೆಯ ಬಾಳು ಉದಗಟ್ಟಿಯವರನ್ನು ಬಿಗಿದಪ್ಪಿ ಅಳುತ್ತಲೇ ಇದ್ದರು. ಆರೋಗ್ಯದಲ್ಲಿಯೂ ಏರುಪೇರು ಕಂಡಾಗ ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದ ವೈದ್ಯರು ವೈದ್ಯರು ಬಿಪಿ ಮತ್ತು ಈಸಿಜಿ ಪರೀಕ್ಷೆ ಮಾಡಿ ತುರ್ತು ಚಿಕಿತ್ಸೆ ನೀಡಿದರು.

Previous articleಮಣ್ಣಲ್ಲಿ ಮಣ್ಣಾದ ಬಾಗೇವಾಡಿ ಸಾಹುಕಾರ
Next articleಪರೋಟಾ ತಯಾರಿಕಾ ಘಟಕದ ಮೇಲೆ ಪಾಲಿಕೆ ಅಧಿಕಾರಿಗಳ ದಾಳಿ: ಏಳು ದಿನದಲ್ಲಿ ಘಟಕ ಬಂದ್ ಮಾಡಲು ಸೂಚನೆ