ಜೂನ್ ೪ ರಂದು ಹೈದ್ರಾಬಾದ್ ಚಲೋ

0
12

ಇಳಕಲ್: ಲಿಂಗಾಯತ ಸಮನ್ವಯ ಸಮಿತಿ ತೆಲಂಗಾಣದ ವತಿಯಿಂದ ಜೂನ್ ೪ ರವಿವಾರದಂದು ಚಲೋ ಹೈದರಾಬಾದ್ ಲಿಂಗಾಯತ ಮಹರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸದಸ್ಯರು ಹೇಳಿದರು.
ಗುರುವಾರದಂದು ಶ್ರೀಮಠದ ಗುರು ಮಹಾಂತಶ್ರೀಗಳ ಸಾನಿಧ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭೀಮರಾವ್ ಬಿರಾದಾರ, ವಿಜಯಕುಮಾರ ಪಟ್ನೆ ರಾಜೇಶ್ವರಿ ಗುಡಚಿ ಗೂಳಪ್ಪ ಕಾರಮಂಡಿ ಲಕ್ಚ್ಮಿಬಾಯಿ ಕಾರಮಂಡಿ ಮಾತನಾಡಿ ಈಗಾಗಲೇ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ೨೩ ರ‍್ಯಾಲಿಗಳನ್ನು ನಡೆಸಿದ್ದು ,೨೪ ನೇ ರ‍್ಯಾಲಿಯನ್ನು ಹೈದರಾಬಾದಲ್ಲಿ ನಡೆಸಲಾಗುವದು ಮುಂಜಾನೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ನಂತರ ಪ್ರಸಾದ ಸ್ವೀಕರಿಸಲಾಗುವದು.
ಪ್ರಸಾದದ ನಂತರ ಬೃಹತ್ ಮೆರವಣಿಗೆ ಹೈದರಾಬಾದ್‌ದ ಪ್ರಮುಖ ಬೀದಿಗಳಲ್ಲಿ ನಡೆಯುವದು ಸಮಿತಿಯ ವತಿಯಿಂದ ಒಟ್ಟು ಎಂಟು ಬೇಡಿಕೆಗಳನ್ನು ಸರಕಾರದ ಮುಂದಿಡುವ ಯೋಚನೆ ಮಾಡಲಾಗಿದೆ ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆ, ಒಬಿಸಿ ಪಟ್ಟಿಯಲ್ಲಿ ಸೇರಿಸುವದು, ವಿಧಾನಸಭೆ ಆವರಣದಲ್ಲಿ ಬಸವಮೂರ್ತಿ ಸ್ಥಾಪನೆ, ನವದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಸಂಸದ ಭವನಕ್ಕೆ ಅನುಭವ ಮಂಟಪ ಎಂಬ ಹೆಸರು ಇಡುವದು , ಬಸವ ಚರಿತ್ರೆಯನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಕೆ, ಬಸವೇಶ್ವರ ಆರ್ಥಿಕ ಅಭಿವೃದ್ಧಿ ಮಂಡಳಿ, ತೆಲಂಗಾಣ ರಾಜ್ಯದ ಎಲ್ಲಾ ಗ್ರಾಮದಲ್ಲಿ ಬಸವೇಶ್ವರ ಅನುಭವ ಮಂಟಪ ನಿರ್ಮಾಣ, ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ರುದ್ರಭೂಮಿಗೆ ಜಾಗೆ ನೀಡುವ ಬೇಡಿಕೆಗಳನ್ನು ಸರಕಾರದ ಮುಂದಿಡಲಾಗುವದು ಎಂದು ವಿವರಿಸಿದರು. ಗುರುಮಹಾಂತಶ್ರೀಗಳು ಮಾತನಾಡಿ ಹೈದ್ರಾಬಾದ್‌ದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗದ ಲಿಂಗಾಯತ ಸಮುದಾಯದವರು ಭಾಗವಹಿಸಿ ಅದನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

Previous articleಸಮುದ್ರ ಕಿನಾರೆಗೆ ಅಪ್ಪಳಿಸಿದ ಮೀನುಗಾರಿಕೆ ಬೋಟ್ : 12 ಲಕ್ಷ ರೂ. ನಷ್ಟ
Next articleಗ್ಯಾರಂಟಿಗೆ ಕಂಡೀಷನ್ ಹಾಕಿದ್ರೆ ಹೋರಾಟ