ಉಡುಪಿ: ಮೆಸ್ಕಾಂನವರೇ ಕ್ಷಮಿಸಿ, ಜೂನ್ ಕರೆಂಟ್ ಬಿಲ್ ಕೊಡಬೇಡಿ. ನಾವು ಬಿಲ್ ಕಟ್ಟಲ್ಲ. ಇದು ಉಡುಪಿ ಸಾಮಾಜಿಕ ಕಾರ್ಯಕರ್ತ ಜಿ. ವಾಸುದೇವ ಭಟ್ ಪೆರಂಪಳ್ಳಿ ತನ್ನ ಮನೆಯ ವಿದ್ಯುತ್ ಬೋರ್ಡಿಗೆ ಅಂಟಿಸಿರುವ ಚೀಟಿ.
ಈ ಕುರಿತು ‘ಸಂಯುಕ್ತ ಕರ್ನಾಟಕ’ದೊಂದಿಗೆ ಮಾತನಾಡಿದ ವಾಸುದೇವ ಭಟ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಚುನಾವಣಾಪೂರ್ವದಲ್ಲಿ ಕಾಂಗ್ರೆಸ್ ನೀಡಿದ ಗ್ಯಾರಂಟಿ ಭರವಸೆಗಳಲ್ಲಿ ಒಂದಾದ 200 ಯುನಿಟ್ ಉಚಿತ ವಿದ್ಯುತ್‌ಗೆ ನಾನೂ ಫಲಾನುಭವಿ. ನಾನು ಮನೆಯಲ್ಲಿಲ್ಲದ ವೇಳೆ ಮೆಸ್ಕಾಂನವರು ಬಿಲ್ ತಂದಲ್ಲಿ ಮುನ್ನೆಚ್ಚರಿಕೆಯಾಗಿ ಈ ರೀತಿಯಲ್ಲಿ ಚೀಟಿ ಅಂಟಿಸಿರುವುದಾಗಿ ತಿಳಿಸಿದರು. ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಸಿದ್ಧರಾಮಯ್ಯ ಅವರಿಗೆ ಶುಭಾಶಯ ಕೋರುವುದಾಗಿ ವಾಸುದೇವ ಭಟ್ ತಿಳಿಸಿದರು.