ನನ್ನನ್ನು ಈಗ ನಿರುದ್ಯೋಗಿ ಮಾಡಿದ್ದಾರೆ

0
25

ಬೆಂಗಳೂರು: ನಾನು ಈ ಸೋಲನ್ನು ಸ್ವೀಕರಿಸುತ್ತೇನೆ. ಆದರೆ ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ಪಡೆಯಲ್ಲ. ಸಾಯುವವರೆಗೂ ರಾಜಕಾರಣದಲ್ಲೇ ಇರುವುದಾಗಿ ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು. ವಿಜಯನಗರ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೋತ ಮೇಲೆ ಮಾತನಾಡುವುದು ಏನೂ ಉಳಿದಿಲ್ಲ. ಚಿನ್ನದಂತಹ ಕ್ಷೇತ್ರ ಬಿಟ್ಟು ಪಕ್ಷ ಹೇಳಿತು ಎಂದು ಬೇರೆ ಕಡೆ ಹೋದರೆ ಜನ ಆಶೀರ್ವಾದ ಮಾಡಲಿಲ್ಲ. ಒಂದು ವಿಚಾರವೆಂದರೆ ನನ್ನನ್ನು ನಿರುದ್ಯೋಗಿ ಮಾಡಿದ್ದಾರೆ. ಬೆಳಗ್ಗೆ ನಾಲ್ಕು ಗಂಟೆಯಿಂದ ಕೆಲಸ ಆರಂಭಿಸುತ್ತಿದ್ದವನು ನಾನು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Previous articleಮೈಲಾರಲಿಂಗನ ಭವಿಷ್ಯವಾಣಿ ಫುಲ್‌ ವೈರಲ್
Next articleಕಾಡಿನಿಂದ ನಾಡಿಗೆ ಬಂದ ಕಾಡಾನೆ