ನೂತನ ಜಿಲ್ಲಾಧಿಕಾರಿಯಾಗಿ ವೈಶಾಲಿ ಎಂ.ಎಲ್. ಅಧಿಕಾರ ಸ್ವೀಕಾರ

ವೈಶಾಲಿ ಎಂ.ಎಲ್.

ಗದಗ: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ೨೦೧೩ರ ಬ್ಯಾಚ್‌ನ ಐಎಎಸ್ ಅಧಿಕಾರಿ ವೈಶಾಲಿ ಎಂ.ಎಲ್. ಗುರುವಾರ ಅಧಿಕಾರ ಸ್ವೀಕರಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪ್ರಭಾರಿ ಜಿಲ್ಲಾಧಿಕಾರಿಗಳಾಗಿದ್ದ ಡಾ. ಸುಶೀಲಾ ಬಿ. ಅವರು ವೈಶಾಲಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ವೈಶಾಲಿ ಎಂ.ಎಲ್ ಅವರು ಸರ್ಕಾರಿ ಸೇವೆಯಲ್ಲಿ ಅಪಾರ ಅನುಭವ ಹೊಂದಿದ್ದು, ಶಿವಮೊಗ್ಗ ತಹಶೀಲ್ದಾರರಾಗಿ ವೃತ್ತಿ ಸೇವೆ ಆರಂಭಿಸಿದ ಇವರು ಹಾಸನ ಹಾಗೂ ಮಂಗಳೂರಿನಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ, ಶಿವಮೊಗ್ಗ ಉಪವಿಭಾಗಾಧಿಕಾರಿ, ರಾಮನಗರ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾಗಿ ಸೇವಾನುಭವ ಹೊಂದಿದ್ದಾರೆ. ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ನಂತರ ಕಳೆದ ಮೂರು ವರ್ಷಗಳಿಂದ ಶಿವಮೊಗ್ಗ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವೈಶಾಲಿ ಎಂ.ಎಲ್ ಸೇವೆ ಸಲ್ಲಿಸಿದ್ದಾರೆ.

ವೈಶಾಲಿ ಎಂ.ಎಲ್.