ಕಾಂಗ್ರೆಸ್ ಮುಖಂಡರ ಮೇಲೆ ಲಾಠಿ ಚಾರ್ಜ್ ಆರೋಪ

0
21

ಬಳ್ಳಾರಿ:ವಿಧಾನ ಸಭಾ ಚುನಾವಣೆಯ ಮತದಾನದ ವೇಳೆ ಕಾಂಗ್ರೆಸ್ ಕಾರ್ಯಕರ್ತರು, ಮತದಾರರ ಮೇಲೆ ಪೊಲೀಸರ ಲಾಠಿ ಚಾರ್ಜ್ ಮಾಡಿದ್ದಾರೆ ಎಂಬ ಆರೋಪವನ್ನು ಕಾಂಗ್ರೆಸ್ ಮುಖಂಡರು ಮಾಡಿದ್ದಾರೆ.
ಮಹಾನಗರ ಪಾಲಿಕೆ 34ನೆಯ ವಾರ್ಡಿನ ಭತ್ರಿ ಪ್ರದೇಶದ 15 ಮತ್ತು 16ನೆಯ ಬೂತ್ ಬಳಿ ಪೊಲೀಸರು ಬಿಜೆಪಿ ಮತ್ತು ಕೆ ಆರ್ ಪಿ ಪಕ್ಷದ ಪರ ವಹಿಸಿಕೊಂಡು ಆ ಪಕ್ಷಗಳ ಮುಖಂಡರ ಮೆಚ್ಚಿಸಲು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಮತದಾರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜೆ.ಎಸ್.ಅಂಜೇನೆಯಲು, ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಸುನೀಲ್ ರಾವೂರ, ಕೆಪಿಸಿಸಿ ಮಾದ್ಯಮ ವಕ್ತಾರ ವೆಂಕಟೇಶ್ ಹೆಗಡೆ, ನಗರ ಘಟಕದ ಕಾರ್ಯಾಧ್ಯಕ್ಷ ವಿಷ್ಣುವರ್ಧನ್ ಬೋಯಾಪಾಟಿ , ಬ್ರೂಸ್ ಪೇಟೆ ಬ್ಲಾಕ್ ಅಧ್ಯಕ್ಷ ಕೆ.ಶ್ರೀನಿವಾಸನ್, ಮುಖಂಡರಾದ ಕೆ.ಶ್ರೀನಿವಾಸನ್, ಸಂತೋಷ್ ಸ್ವಾಮಿ, ಚಲ್ಲ ರಮೇಶ, ಅರವಿಂದ್ ಚೌದರಿ ಪ್ರತಿಭಟಿಸಿದರು.

Previous articleಸತೀಶ್‌ ಜಾರಕಿಹೊಳಿ ಮತ ಚಲಾವಣೆ
Next articleಮುಗ್ಧತೆಯ ಪ್ರತಿರೂಪ