ಮತದಾನ ಮಾಡಲಾಗದೆ ಮಾಜಿ ಯೋಧನ ಪರದಾಟ

0
24

ಬೆಳಗಾವಿ : ಜಿಲ್ಲೆ ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಂಟಮೂರಿ ಗ್ರಾಮದಲ್ಲಿ ಮತದಾರರ ಯಾದಿಯಿಂದ ಮತದಾರರ ಹೆಸರುಗಳ ನಾಪತ್ತೆಯಾಗಿದ್ದು, ಮತದಾನಕ್ಕೆ ಬಂದ ವಯಸ್ಕರರು ಸೇರಿದಂತೆ ಕೆಲವರು ಮತ ಕೇಂದ್ರದ ಮುಂದೆ ಹಕ್ಕಿನಿಂದ ವಂಚಿತರಾಗಿ ಹೆಸರು ಹುಡುಕುತ್ತ ಅಲೆದಾಡುವ ದೃಶ್ಯಕಂಡು ಬಂತು.
ವಂಟಮೂರಿ ಗ್ರಾಮದ ಸತ್ಯಪ್ಪಾ ಲಕ್ಕಪ್ಪ ಕಿಲಾರಗಿ ಎಂಬುವ 89 ವರ್ಷ ವಯಸ್ಸಿನ ವಯೋವೃದ್ದರೊಬ್ಬರು ಹಾಗೂ ಸ್ವಾತಂತ್ರ್ಯ ಯೋಧರಾಗಿರುವ ಇವರು ತಮ್ಮ ಮತದಾನದ ಗುರುತಿನ ಚೀಟಿ ಹಾಗೂ ಪ್ಯಾನ್ ಕಾರ್ಡ್ ಕೈಯಲ್ಲಿ ಹಿಡಿದುಕೊಂಡು ಮತದಾರರ ಯಾದಿಯಲ್ಲಿ ಹೆಸರು ಇಲ್ಲದೆ ಮತದಾನದಿಂದ ವಂಚಿತನಾಗಿ ಮತದಾನ ಕೇಂದ್ರದ ಮುಂದೆ ಅಲದಾಡುತ್ತಿದ್ದ ದೃಶ್ಯ ಕಂಡು ಬಂದಿತು.
ಅಲ್ಲದೆ ನಾನು ಮತದಾನದಿಂದ ನಾನು ವಂಚಿತನಾಗಬಾರದು ಏನಾದರು ಮಾಡಿ. ನನ್ನ ಹಕ್ಕು ಚಲಾಯಿಸಲು ಅವಕಾಶ ಮಾಡಿಕೊಡಿ ಎಂದು ಮಾಧ್ಯಮ ದವರ ಮುಂದೆ ತಮ್ಮ ಅಳಲನ್ನು ಸತ್ಯಪ್ಪಾ ಅವರು ತೋಡಿಕೊಂಡರು.
ಈ ಕುರಿತು ಸ್ಥಳದಲ್ಲಿ ಇದ್ದ ಅಂಗನವಾಡಿ ಕಾರ್ಯಕರ್ತನ್ನು ವಿಚಾರಿಸಿದಾಗ ವಂಟಮೂರಿ ಗ್ರಾಮದಲ್ಲಿ ಕೊನೆಯ ಕ್ಷಣದಲ್ಲಿ ಪ್ರತಿ ಮತದಾನ ಕೇಂದ್ರದಿಂದ 4 ಮತದಾರ ಹೀಗೆ ವಂಟಮೂರಿ ಗ್ರಾಮದಲ್ಲಿ ಸುಮಾರು 14ರಿಂದ 15 ಜನ ಮತದಾರರ ಹೆಸರು ನಾಪತ್ತೆ ಆಗಿರುವದು ನಿಜಾ. ಅದು ಬಹುತೇಕ ಗರುಡಾ ಆಪ್ ನಿಂದ ಆಗಿರಬಹುದು ಎಂದು ದೂರಲಾಗುತ್ತಿವೆ.
ಒಟ್ಟಿನಲ್ಲಿ ವಂಟಮೂರಿ ಗ್ರಾಮದಲ್ಲಿ ಓರ್ವ ಸ್ವಾತಂತ್ರ್ಯ ಹೋರಾಟಗಾರ ಸೇರಿ ಸುಮಾರು 15 ಜನ ಮತದಾನದಿಂದ ವಂಚಿತರಾಗಿರುವ ಬಗ್ಗೆ ತಿಳಿದುಬಂದಿದೆ.

Previous articleಮತಗಟ್ಟೆಯಲ್ಲಿ ತಾಪಂ ನೌಕರ ಪಕ್ಷದ ಪರ ಪ್ರಚಾರ: ಆರೋಪ
Next articleಬಿಜೆಪಿ ಪರ ಅಧಿಕಾರಿ ಮತ ಚಲಾವಣೆ: ಉದ್ವಿಗ್ನ ಸ್ಥಿತಿ