ಇಬ್ಬರು ಪೊಲೀಸರು ನಾಪತ್ತೆ: ಕೊಚ್ಚಿ ಹೋದ ಶಂಕೆ

0
15
ಮಳೆ

ಕೊಪ್ಪಳ: ಬಂದೋಬಸ್ತಿಗೆ ತೆರಳಿದ್ದ ಇಬ್ಬರು ಪೊಲೀಸರು ನಾಪತ್ತೆಯಾದ ಘಟನೆ ಕುಕನೂರು ತಾಲೂಕಿನ ತೊಂಡಿಹಾಳ ಗ್ರಾಮದ ಹಳ್ಳದ ಬಳಿ ಘಟನೆ ಮಂಗಳವಾರ ನಡೆದಿದ್ದು, ಇಬ್ಬರು ಪೊಲೀಸರು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.
ನಾಪತ್ತೆಯಾದ ಪೊಲೀಸರನ್ನು ಮಹೇಶ ಹಾಗೂ ನಿಂಗಪ್ಪ ಎಂದು ಗುರುತಿಸಲಾಗಿದೆ. ಮೊಬೈಲ್ ಲೊಕೇಷನ್ ತೊಂಡಿಹಾಳ ಹಳ್ಳದ ಬಳಿ ತೋರಿಸುತ್ತಿರುವುದು ಅನುಮಾನಕ್ಕೆ ಎಡೆ ಮಾಡಿದೆ.
ಮುಂಡರಗಿ ಪೊಲೀಸ್ ಠಾಣೆಯ ಸುಮಾರು ಹತ್ತಕ್ಕೂ ಹೆಚ್ಚು ಪೊಲೀಸರು ಗದಗ ಜಿಲ್ಲೆಯ ಗಜೇಂದ್ರಗಡಕ್ಕೆ ಬಂದೊಬಸ್ತಿಗೆ ತೆರಳಿದ್ರು ವಾಪಸ್ಸು ಮುಂಡರಗಿಗೆ ಬರುವ ಸಂದರ್ಭದಲ್ಲಿ ತೊಂಡಿಹಾಳ ಗ್ರಾಮದ ಬಳಿ ನಾಪತ್ತೆಯಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಭೇಟಿ ನೀಡಿ, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಳ್ಳದ ಸುತ್ತಮುತ್ತ ಬಹಳಷ್ಟು ಜನರು ಜಮಾವಣೆ ಗೊಂಡಿದ್ದಾರೆ.

ಮಳೆ
Previous articleಮುರುಘಾಶ್ರೀ ಘಟನೆ ನಡೆದಿದ್ದು ದುರದೃಷ್ಟಕರ
Next articleಮಳೆ ಅಬ್ಬರ ತುಳಸಿಗಿರೀಶನಿಗೆ ಜಲದಿಗ್ಭಂಧನ