ಕೇಕರೆ ಮನೆ ಮೇಲೆ ಐಟಿ ದಾಳಿ

0
19

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಸಹಾಯಕ ಪ್ರಶಾಂತ ಕೇಕರೆ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಗುರುವಾರ ಸಂಜೆ ೫ರ ಸುಮಾರಿಗೆ ಇಲ್ಲಿಯ ಸಪ್ತಾಪುರದ ಖಿಷಿ ಪಾರ್ಕ ಬಳಿ ಇರುವ ಪ್ರಶಾಂತ ಕೇಕರೆ ಅವರ ಮನೆಗೆ ಆಗಮಿಸಿದ ಐಟಿ ಅಧಿಕಾರಿಗಳು ಕಳೆದ ಒಂದು ಗಂಟೆಯಿಂದ ದಾಖಲೆ ಪರಿಶೀಲಿಸುತ್ತಿದ್ದಾರೆ.
ಚುನಾವಣೆ ಹತ್ತಿರ ಬಂದಾಗ ಐಟಿ ದಾಳಿ ಮಾಡುವುದೇ ಬಿಜೆಪಿಗರ ರೂಢಿ ಎಂದು ಕಳೆದ ಕೆಲ ದಿನಗಳ ಹಿಂದೆ ಮಾಜಿ ಸಚಿವ ವಿನಯ ಕುಲಕರ್ಣಿ ಪತ್ರಿಕಾಗೋಷ್ಠಿ ಮೂಲಕ ನೇರ ಆರೋಪ ಮಾಡಿದ್ದರು. ಇದರ ಬೆನ್ನಲ್ಲಿಯೇ ಪ್ರಶಾಂತ ಅವರ ನಿವಾಸದ ಮೇಲೆ ದಾಳಿ ನಡೆಸಿರುವುದು ವಿನಯ ಕುಲಕರ್ಣಿ ಅವರಿಗೆ ಶಾಕ್ ನೀಡಿದಂತಾಗಿದೆ.

Previous articleಗುಂಡು ಹೊಡೆದುಕೊಂಡು ಪೊಲೀಸ್ ಪೇದೆ ಆತ್ಮಹತ್ಯೆ
Next articleಮತದಾರರಿಗೆ ಹಂಚಲು ಸಂಗ್ರಹಿಸಿದ್ದ ೪ ಕೋಟಿ ೫ ಲಕ್ಷ ರೂಪಾಯಿ ವಶ