ಚಿತ್ರಕಲಾವಿದ ವಾಮನ್ ರಾವ್ ನಿಧನ

ನಾಡಿನ ಹಿರಿಯ ಚಿತ್ರಕಲಾವಿದ ವಾಮನ್ ರಾವ್ (78) ಇಂದು ಬೆಳಿಗ್ಗೆ ನಿಧನರಾದರು. ವಾಮನ್ ಎಂದು ಖ್ಯಾತರಾಗಿದ್ದ ಅವರು ಪ್ರಜಾಮತ, ಸಂಯುಕ್ತ ಕರ್ನಾಟಕ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಚಿತ್ರಕಲಾವಿದರಾಗಿ 50 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗ ಇದ್ದಾರೆ.