‘ನಾನೊಬ್ಬ ಬಜರಂಗಿ’ ಅಭಿಯಾನ ಶುರು

0
25

ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ವಿರುದ್ಧ ಕ್ರಮದ ತೆಗೆದುಕೊಳ್ಳುವುದಾಗಿ ಹೇಳಿದ್ದು, ಇದನ್ನು ಖಂಡಿಸಿ ಬಿಜೆಪಿ ವಿನೂತನ ಅಭಿಯಾನವನ್ನು ಆರಂಭಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ “ನಾನೊಬ್ಬ ಬಜರಂಗಿ” ಅಭಿಯಾನ ಶುರು ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್ ಪಿಕ್ಚರ್ ಬದಲಿಸುವ ಮೂಲಕ ವಿರೋಧ ವ್ಯಕ್ತಪಡಿಸುತ್ತಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಂಸದೆ ಶೋಭಾ ಕರಂದ್ಲಾಜೆ, ಸಂಸದ ಪ್ರತಾಪ ಸಿಂಹ, ತೇಜಸ್ವಿ ಸೂರ್ಯ, ಸಚಿವ ಡಾ. ಅಶ್ವಥ್ ನಾರಾಯಣ ಸೇರಿದಂತೆ ಅನೇಕರು ತಮ್ಮ ಟ್ವಿಟರ್‌, ಫೇಸ್‌ಬುಕ್ ಪ್ರೊಫೈಲ್ ಪಿಕ್ಚರ್ ಬದಲಾವಣೆ ಮಾಡಿ ನಾನೊಬ್ಬ ಬಜರಂಗಿ ಎಂಬ ಪ್ರೊಫೈಲ್ ಪಿಕ್ಚರ್ ಅಳವಡಿಸಿಕೊಂಡಿದ್ದಾರೆ.

Previous articleಕಾಂಗ್ರೆಸ್ ಹೆಸರು ಹೇಳಲು ಶೆಟ್ಟರಗೆ ಭಯ
Next articleತಾಕತ್ತಿದ್ದರೆ ಬಜರಂಗದಳ ಬ್ಯಾನ್ ಮಾಡಿ