ಹಿಂದುತ್ವ ವಿರೋಧಿ ನಿಲುವು

0
103

ಉಡುಪಿ : ಬಜರಂಗ ದಳವನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸುವ ಮೂಲಕ ಕಾಂಗ್ರೆಸ್ ಹಿಂದುತ್ವ ವಿರೋಧಿ ನಿಲುವನ್ನು ಪ್ರದರ್ಶಿಸಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಇಂದು ಜಿಲ್ಲಾ ಬಿಜೆಪಿ ‌ಮಾಧ್ಯಮ‌‌ ಕೇಂದ್ರದಲ್ಲಿ ಜಿಲ್ಲಾ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಸಂದರ್ಭ ಮಾತನಾಡಿದರು. ಪಿಎಫ್.ಐ ನಿಷೇಧದ ಬಗ್ಗೆ ಕಾಂಗ್ರೆಸ್ ತಿಳಿಸಿದ್ದು, ಅದು ಈಗಾಗಲೇ ನಿಷೇಧಗೊಂಡಿರುವುದು ಕಾಂಗ್ರೆಸ್ ಅರಿವಿಗೆ ಬಂದಿಲ್ಲವೇ ಎಂದು ಪ್ರಶ್ನಿಸಿದ ಕೋಟ, ಪಿಎಫ್.ಐ. ನಿಷೇಧಕ್ಕಿಂತ ರಾಷ್ಟ್ರಭಕ್ತರ ಸಂಘಟನೆಯಾದ ಬಜರಂಗ ದಳ ನಿಷೇಧಿಸುವುದರಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ‌ ಆಸಕ್ತಿ‌ ಇದ್ದಂತಿದೆ ಎಂದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಮುಸ್ಲಿಂ ಓಲೈಕೆಯ ಪ್ರಣಾಳಿಕೆ ಸಿದ್ಧಪಡಿಸಿರುವ ಕಾಂಗ್ರೆಸ್, ಬಜರಂಗ ದಳ ನಿಷೇದಿಸುವುದಾಗಿ ಹೇಳುವ ಮೂಲಕ ತನ್ನ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದುಕೊಂಡಿದೆ ಎಂದರು.

Previous articleನಾನು ಗೌಡ್ತಿ ಎಂದ ರಮ್ಯಾ
Next articleಬಜರಂಗಿಗಳು ಸಿಡಿದೆದ್ದರೆ ಕಾಂಗ್ರೆಸ್ ದೇಶಬಿಟ್ಟು ಹೋಗಬೇಕಾಗುತ್ತೆ