ನಾನು ಗೌಡ್ತಿ ಎಂದ ರಮ್ಯಾ

0
20

ಮಂಡ್ಯ: ನಾನು ಗೌಡ್ತಿ, ನಾನೊಬ್ಬಳು ಗೌಡ್ತಿಯಾಗಿರುತ್ತೇನೆ ಎಂದು ಮಾಜಿ ಸಂಸದೆ ನಟಿ ರಮ್ಯಾ ಹೇಳಿದ್ದಾರೆ, ಮಂಡ್ಯದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು ಮಂಡ್ಯ ಜನರ ಸಂಬಂಧ ನನ್ನ ಜೊತೆ ಸದಾ ಇರುತ್ತದೆ. ರಾಜಕೀಯ ಅಂತಾ ಇಲ್ಲ, ನಾನು ಮಂಡ್ಯದವಳೇ ಆಗಿದ್ದು, ಎಲ್ಲಾ ವಿಚಾರದಲ್ಲಿ ಮಂಡ್ಯದಲ್ಲಿ ಇರುತ್ತೇನೆ ಎಂದು ಹೇಳಿದರು. ಇನ್ನು ಅಂಬಿ ಸಾವಿಗೆ ಮಂಡ್ಯಕ್ಕೆ ಬರದ ವಿಚಾರವಾಗಿ ಪ್ರತಿಕ್ರಿಯಿಸಿದ ನಟಿ ರಮ್ಯಾ, ನನಗೆ ಆಗ ಟ್ಯೂಮರ್ ಬಂದಿತ್ತು. ನಾನು ಆಗ ಸರ್ಜರಿ ಮಾಡಿಸಿದ್ದರಿಂದ ಪಬ್ಲಿಕ್ ಆಗಿ ಬರಲು ಆಗಲಿಲ್ಲ ಮತ್ತು ಬಹಿರಂಗವಾಗಿ ಬಂದು ದುಃಖ ಹಂಚಿಕೊಳ್ಳೋ ಅಭ್ಯಾಸವೇ ಇಲ್ಲ. ಬೇರೆ ಅವರು ಕ್ಯಾಮೆರಾ ಮುಂದೆ ಬಂದು ಹಂಚಿಕೊಳ್ಳುತ್ತಾರೆ ಎಂದರು.

Previous articleರಾಜ್ಯಕ್ಕೆ ಶ್ರೀಕೃಷ್ಣದೇವರಾಯನ ಮಾದರಿಯ ಅಭಿವೃದ್ಧಿ
Next articleಹಿಂದುತ್ವ ವಿರೋಧಿ ನಿಲುವು