ಹುಬ್ಬಳ್ಳಿ : ಮೇ 2 ರಂದು ಲೊಂಡಾ ನಿಲ್ದಾಣದಲ್ಲಿ ರೈಲ್ವೆ ಕಾಮಗಾರಿಗೆ ಸಂಬಂಧಿಸಿದಂತೆ ಲೈನ್ ಬ್ಲಾಕ್ ಇರುವದರಿಂದ, ಕೆಲವು ರೈಲು ಸೇವೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ ಅವುಗಳು ಹೀಗಿವೆ:
- ಮೇ 2 ರಂದು ಬೆಳಗಾವಿ – ಸಿಕಂದರಾಬಾದ ಡೈಲಿ ಎಕ್ಸ್ ಪ್ರೆಸ್ ವಿಶೇಷ ರೈಲು (07335) ಬೆಳಗಾವಿಯಿಂದ 30 ನಿಮಿಷ ತಡವಾಗಿ ಪ್ರಾರಂಭವಾಗಲಿದೆ.
- ಮೇ 2 ರಂದು ಮೀರಜ್‌ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17331 ಮೀರಜ್ – ಎಸ್.ಎಸ್.ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 120 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.
- ಮೇ 2 ರಂದು ಹುಬ್ಬಳ್ಳಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17332 ಎಸ್.ಎಸ್.ಎಸ್ ಹುಬ್ಬಳ್ಳಿ – ಮೀರಜ್ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 70 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.