ಆಸ್ತಿ ವಿವಾದ: ಆರು ಜನರ ಮೇಲೆ ಹಲ್ಲೆ

0
7
ಆಸ್ತಿ ವಿವಾದ

ಹುಬ್ಬಳ್ಳಿ: ಇಲ್ಲಿನ ಜಂಗ್ಲಿಪೇಟೆಯಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರೊಬ್ಬರು ತಮ್ಮ ಅಳಿಯನೊಂದಿಗೆ ಸೇರಿ ಆರು ಜನರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಭಾನುವಾರ ತಡರಾತ್ರಿ ನಡೆದಿದೆ.
ಪಾಲಿಕೆ ಸದಸ್ಯೆ ಸುಮಿತ್ರಾ ಗುಂಜಾಳ, ಈರಮ್ಮ ಗುಂಜಾಳ, ಗೌರಮ್ಮ ಗುಂಜಾಳ, ಬಸವರಾಜ ಗುಂಜಾಳ, ಭಾಗ್ಯಶ್ರೀ ಗುಂಜಾಳ ಹಾಗೂ ಲೋಕೇಶ ಗುಂಜಾಳ ಹಲ್ಲೆಗೊಳಗಾದವರು. ಕಾಂಗ್ರೆಸ್ ಮುಖಂಡ ಚನ್ನಬಸವಗೌಡ ಗದಿಗೆಪ್ಪಗೌಡರ ಮತ್ತು ಹರ್ಷವರ್ಧನ ಮಾಲಣ್ಣವರ ಹಲ್ಲೆ ಮಾಡಿದ್ದಾರೆ ಎಂದು ಜಂಗ್ಲಿಪೇಟೆಯ ಲೋಕೇಶ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಕಡಪಟ್ಟಿ ಹಳಿಯಾಳದಲ್ಲಿ ಲೋಕೇಶ ಅವರ ತಂದೆ ಹೆಸರಲ್ಲಿದ್ದ ಜಮೀನನ್ನು ಎಂಟು ವರ್ಷದ ಹಿಂದೆ ಗದಿಗೆಪ್ಪಗೌಡರ, ಪತ್ನಿ ಹೆಸರಲ್ಲಿ ಖರೀದಿಸಿದ್ದರು. ಅದು ಅವರ ಹೆಸರಿಗೆ ನೋಂದಣಿಯಾಗಿರಲಿಲ್ಲ. ಆಸ್ತಿಯನ್ನು ಹೆಸರಿಗೆ ಮಾಡಿಕೊಡುವಂತೆ ಅವರ ಪತ್ನಿ ವಿನಂತಿಸಿದ್ದರು. ನಂತರ ಅವರಿಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅಳಿಯನ ಜೊತೆ ಬಂದ ಗದಿಗೆಪ್ಪಗೌಡರ, ಆರು ಜನರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Previous articleಧಾರವಾಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ಥ
Next articleಮೃತ ಬಾಲಕನನ್ನು ಬದುಕಿಸಲು ಉಪ್ಪಿನ ರಾಶಿಯಲ್ಲಿ ಮಲಗಿಸಿದ ಪೋಷಕರು