ಬಳ್ಳಾರಿ: ಬಹಿರಂಗ ಸಭೆ ರದ್ದುಪಡಿಸಿದ ಸಿಎಂ

0
19
CM

ಬಳ್ಳಾರಿ: ಬಳ್ಳಾರಿಯಲ್ಲಿ ಬಹಿರಂಗ ಸಭೆ ನಡೆಸಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಬೇಕಿದ್ದ ಸಿಎಂ ಬಸವರಾಜ ಬೊಮ್ಮಾಯಿ ಏಕಾಏಕಿ ಸಭೆ ರದ್ದುಗೊಳಿಸಿ ಹುಬ್ಬಳ್ಳಿ ಕಡೆ ಪ್ರಯಾಣ ಬೆಳೆಸಿದರು.
ರೋಡ್ ಶೋ ನಡೆಸುವಾಗ ಬ್ರೂಸ್ ಪೇಟೆ ಪೊಲೀಸ್ ಠಾಣೆ ಬಳಿ ರಸ್ತೆ ಪಕ್ಕದಲ್ಲಿಯೇ ತೆರೆದ ವಾಹನದಲ್ಲಿಯೇ ಮಾತನಾಡಿದ ಬೊಮ್ಮಾಯಿ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದರು.
ಬಳ್ಳಾರಿಯ ಈ ಚುನಾವಣೆ ಹಣ ಬಲ, ಜನ ಬಲದ ಚುನಾವಣೆ. ನಮ್ಮ ಕಾರ್ಯಕ್ರಮ ಗಮನಿಸಿ ಮತ ಚಲಾಯಿಸಿ ಎಂದು ಕರೆಕೊಟ್ಟರು. ಸಂಸದ ದೇವೇಂದ್ರಪ್ಪ, ಗುತ್ತಿಗನೂರು ವಿರೂಪಾಕ್ಷ ಗೌಡ, ಪಕ್ಷದ ಅಭ್ಯರ್ಥಿ ಸೋಮಶೇಖರ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಮುರಹರ ಗೌಡ ಇದ್ದರು.

Previous articleಕಾಂಗ್ರೆಸ್‌ ರಿವರ್ಸ್ ಗೇರ್ ಸರ್ಕಾರ
Next articleಅಪಘಾತ: ವೃದ್ದೆ ಸಾವು