ನಾಳೆ ಬಳ್ಳಾರಿಯಲ್ಲಿ ರಾಹುಲ್ ಗಾಂಧಿ ರೋಡ್ ಶೋ

0
17

ಬಳ್ಳಾರಿ:ವಿಧಾನ ಸಭಾ ಚುನಾವಣೆ ನಿಮಿತ್ತ ಏಪ್ರಿಲ್ 28ರಂದು ಬಳ್ಳಾರಿ ನಗರಕ್ಕೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಆಗಮಿಸಲಿದ್ದು, ರೋಡ್ ಶೋ, ಬಹಿರಂಗ ಸಭೆ ಮೂಲಕ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚನೆ ಮಾಡುವರು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆವರು, ಟಿಬಿ ಸ್ಯಾನಿಟೋರಿಯಮ್ ನಿಂದ ರೋಡ್ ಶೋ ಆರಂಭ ಮಾಡಲಿದ್ದಾರೆ. ಅಲ್ಲಿಂದ ನೇರ ಮೋತಿ ವೃತ್ತಕ್ಕೆ ಬಂದು ಇಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ ಎಂದು ಅವರು ಹೇಳಿದರು.
ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್, ಸುನೀಲ್ ರಾವೂರ್, ಜೆ.ಎಸ್.ಆಂಜನೇಯಲು, ವಿಷ್ಣು ಬೋಯಾಪಾಟಿ, ಸತ್ಯ, ಶ್ರೀನಿವಾಸ, ಕೊಳಗಲ್ ಅಂಜಿನಿ ಇದ್ದರು.

Previous articleಮೋದಿ ಕಾರ್ಯಕ್ರಮಕ್ಕೆ ಅನುಮತಿ ಪಡೆದಿಲ್ಲ: ಸಭಾ ವೆಚ್ಚ ಅಭ್ಯರ್ಥಿ ಮೇಲೆ ಹಾಕಲು ಆಗ್ರಹ
Next articleಪಾಟೀಲ್ ಗೆಲ್ಲಿಸಿ,ಅಭಿವೃದ್ಧಿಗೆ ಜೈಕಾರ ಹಾಕಿ : ಸುದೀಪ್ ಕರೆ