ಸುಡಾನ್‌ನಲ್ಲಿ ಸಿಲುಕಿದ್ದ ದಾವಣಗೆರೆಯ 33 ಜನ ಸುರಕ್ಷಿತ

ದಾವಣಗೆರೆ: ಸುಡಾನ್‌ನಲ್ಲಿ ಸಿಲುಕಿದ್ದ ಜಿಲ್ಲೆಯ ಗೋಪ್ನಾಳ್ ಗ್ರಾಮದ 20 ಮತ್ತು ಅಸ್ತಾಪನಹಳ್ಳಿ ಗ್ರಾಮದ 13 ಜನರು ಭಾರತಕ್ಕೆ ಸುರಕ್ಷಿತವಾಗಿ ವಾಪಸ್ಸಾಗುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದ್ದಾರೆ
ಸುಡಾನ್ ನಲ್ಲಿ ಸಿಲುಕಿರುವ ಅವರುಗಳನ್ನು ಭಾರತಕ್ಕೆ ಕರೆತರಲು ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದು, ಅವರೆಲ್ಲಾ ಸುಡಾನ್ ಬಂದರು ಕಡೆಗೆ ಬಸ್‌ನಲ್ಲಿ ತೆರಳುತ್ತಿದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.