ದಾವಣಗೆರೆ ನೂತನ ಎಸ್ಪಿಯಾಗಿ ಡಾ.ಕೆ. ಅರುಣ್ ಅಧಿಕಾರ ಸ್ವೀಕಾರ

0
17
DVG SP

ದಾವಣಗೆರೆ: ಜಿಲ್ಲಾ ಪೊಲೀಸ್ ನೂತನ ವರಿಷ್ಠಾಧಿಕಾರಿಯಾಗಿ ಡಾ.ಕೆ. ಅರುಣ್ ಸೋಮವಾರ ಅಧಿಕಾರ ವಹಿಸಿಕೊಂಡರು.

ಸಿ.ಬಿ.ರಿಷ್ಯಂತ್ ಅವರನ್ನು ರಾಜ್ಯ ಸರ್ಕಾರ ದಿಢೀರ್ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಅರುಣ್ ಅವರು ನೇಮಕಗೊಂಡಿದ್ದು, ಹಿಂದಿನ ಎಸ್ಪಿಯಾಗಿದ್ದ ಸಿ.ಬಿ. ರಿಷ್ಯಂತ್ ಅವರು ಇಂದು ಅಧಿಕಾರ ಹಸ್ತಾಂತರಿಸಿ ಶುಭಕೋರಿದರು.

ಡಾ. ಕೆ. ಅರುಣ್ ಈ ಹಿಂದೆ ವಿಜಯನಗರ ಜಿಲ್ಲೆಯ ರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಡಾ. ಅರುಣ್ ಅವರು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಆಗುವ ಮುನ್ನ ಕಲಬುರಗಿಯ ಪೊಲೀಸ್ ತರಬೇತಿ ಶಾಲೆಯ ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

Previous articleಈ ಬಾರಿ `ಕಪ್ ನಮ್ದೇ’
Next articleತೇರದಾಳ: ಕೊನೆಯ 30 ನಿಮಿಷದಲ್ಲಿ 7 ನಾಮಪತ್ರ ಹಿಂದಕ್ಕೆ