ಸಮಾನ ಅಂಕ ಪಡೆದ ಅವಳಿ ಸಹೋದರಿಯರು

0
12

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವಳಿ ಸಹೋದರಿಯರು ವಿಶೇಷ ಸಾಧನೆ ಮಾಡಿದ್ದಾರೆ. ಈ ಅವಳಿ ಹೆಣ್ಣು ಮಕ್ಕಳು ಪಿಯುಸಿ ಪರೀಕ್ಷೆಯಲ್ಲಿ ಸಮಾನ ಅಂಕ ಪಡೆದು ಎಲ್ಲರು ನಿಬ್ಬೆರಗಾಗುವಂತೆ ಮಾಡಿದ್ದಾರೆ. ದ. ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಪುಣ್ಕೆದಡಿ ಉಮೇಶ್ ಗೌಡ ಪಿ.ಎಚ್. ಮತ್ತು ಗೀತಾ ದಂಪತಿಯ ಪುತ್ರಿಯರಾದ ಸ್ಪಂದನ, ಸ್ಪರ್ಶ ಎಂಬ ಅವಳಿ ಸಹೋದರಿಯರು, ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದು ೬೦೦ರಲ್ಲಿ ೫೯೪ ಅಂಕ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ.

Previous articleಮತದಾರರಿಗೆ ಹಂಚಲು ತಂದಿದ್ದ ಕಾಮಾಕ್ಷಿ ದೀಪ ವಶಕ್ಕೆ
Next articleಡಿ. ಕೆ. ಶಿವಕುಮಾರ್ ಹೆಲಿಕಾಪ್ಟರ್ ತಪಾಸಣೆ