Home Advertisement
Home ನಮ್ಮ ಜಿಲ್ಲೆ ಕೊಡಗು ವರ್ತಕನ ಮೇಲೆ ಗುಂಡಿನ ದಾಳಿ

ವರ್ತಕನ ಮೇಲೆ ಗುಂಡಿನ ದಾಳಿ

0
152

ಕೊಡಗು: ನಿವೃತ ಎಸ್ಪಿ ಪುತ್ರನೊಬ್ಬ ಗುಂಡಿನ ದಾಳಿ ನಡೆಸಿದ ಘಟನೆ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮದಲ್ಲಿ ನಡೆದಿದೆ.
ರಂಜನ್ ಚಿಣ್ಣಪ್ಪ ಎಂಬಾತನೇ ತನ್ನಲ್ಲಿದ್ದ ರಿವಾಲ್ವಾರ್‌ನಿಂದ ವರ್ತಕನ ಮೇಲೆ ಗುಂಡು ಹಾರಿಸಿದ್ದಾನೆ. ಆದರೆ ಕೂದಲಳೆಯ ಅಂತರದಲ್ಲಿ ವರ್ತಕ ಕೆ. ಬೋಪಣ್ಣ ಪಾರಾಗಿದ್ದಾರೆ.
ರಂಜನ್‌ ತನ್ನ ಅಂಗಡಿಯಲ್ಲಿ ಬಾಡಿಗೆ ಇದ್ದ ಬೋಪಣ್ಣನಿಗೆ ಅಂಗಡಿ ಖಾಲಿ ಮಾಡುವಂತೆ ಹೇಳಿದ್ದು ಆತ ಕಾಲಾವಕಾಶ ಕೊಡುವಂತೆ ಕೇಳಿದ್ದ, ಇಂದು ಪುನಃ ಖಾಲಿ ಮಾಡುವಂತೆ ರಂಜನ್‌ ಹೇಳಿದ್ದಾನೆ. ಆಗ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ರಂಜನ್‌ ತನ್ನಲ್ಲಿದ್ದ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದಾನೆ. ಬಳಿಕ ರಂಜನ್‌ ಮೇಲೆ ಹಲ್ಲೆ ಆಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತಂತೆ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಶ್ರೀರಂಗಪಟ್ಟಣ: ಹೊತ್ತಿ ಉರಿದ ಚಲಿಸುತ್ತಿದ್ದ ಖಾಸಗಿ ಬಸ್
Next articleಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾದ ವಿದ್ಯಾರ್ಥಿ