ಚಿತ್ರದುರ್ಗ ಪೊಲೀಸ್ ಯಾರನ್ನು ಬಂಧಿಸಿಲ್ಲ ಎಂದ ಎಸ್ಪಿ

0
7

ಬಳ್ಳಾರಿ:ಚಿತ್ರದುರ್ಗ ಮುರುಘಾ ಮಠದ ಮುರುಘರಾಜೇಂದ್ರ ಸ್ವಾಮೀಜಿ ಲೈಂಗಿಕ ಕಿರುಕುಳಕ್ಕೆ ಸಂಬಂಧಪಟ್ಟ ಹಾಗೆ ಮೂರನೆಯ ಆರೋಪಿ ಬಸವಾದಿತ್ಯ ಸ್ವಾಮೀಜಿ ಬಂಧನ ಕುರಿತು ಚಿತ್ರದುರ್ಗ ಪೊಲೀಸರು ನಮಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚುಟುಕು ಇಂಗ್ಲಿಷ್ ಹೇಳಿಕೆ ನೀಡಿರುವ ಅವರು, ಚಿತ್ರದುರ್ಗ ಪೊಲೀಸರು ನಮ್ಮ ಜಿಲ್ಲೆಯ ಪರಿಮಿತಿಯಲ್ಲಿ ಯಾವುದೇ ವ್ಯಕ್ತಿಯನ್ನು ಬಂಧಿಸಿದ ಕುರಿತು ಮಾಹಿತಿ ನೀಡಿಲ್ಲ ಎಂದು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಚಿತ್ರದುರ್ಗ ಪೊಲೀಸರು ನಿನ್ನೆ ಮುರುಘಾ ಶರಣರ ಲೈಂಗಿಕ ಪ್ರಕರಣದ ಆರೋಪಿ ಬಸವಾದಿತ್ಯ ಸ್ವಾಮಿಯನ್ನು ನಿನ್ನೆ ರಾತ್ರಿ ಬಂಧಿಸಿದ್ದಾರೆ ಎನ್ನಲಾಗಿದೆ. ಪೂರ್ವಾಶ್ರಮದ ಸಂಬಂಧಿಕರ ಮನೆ ಒಂದರಲ್ಲಿ ಅವಿತುಕೊಂಡಿದ್ದ ಸ್ವಾಮೀಜಿಯನ್ನು ಬಂಧಿಸಿದ ಪೊಲೀಸರು ಅಜ್ಞಾತ ಸ್ಥಳಕ್ಕೆ ಕರೆದು ಒಯ್ದಿದ್ದಾರೆ ಎನ್ನಲಾಗುತ್ತಿದೆ.

Previous article`ಯದ್ಭಾವಂ ತದ್ಭವತಿ…….’
Next articleಸ್ವಾಮೀಜಿ ನೇಣಿಗೆ ಶರಣು