ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದ ಸಾಯಿಸ್ ಗೋಣಿ

0
34

ಹುಬ್ಬಳ್ಳಿ: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಹುಬ್ಬಳ್ಳಿಯ ಚೌಗಲಾ ಶಿಕ್ಷಣ ಸಂಸ್ಥೆಯ ಭೈರಿದೇವರಕೊಪ್ಪದ ವಿದ್ಯಾನಿಕೇತನ ಪಿಯು ಸೈನ್ಸ್ ಕಾಲೇಜಿನ ವಿದ್ಯಾರ್ಥಿ ಸಾಯಿಸ್ ಗೋಣಿ ಭೂಮಿ ರಾಜ್ಯಕ್ಕೆ ಮೂರನೇ‌ ರ‍್ಯಾಂಕ್ ಪಡೆದು ಉತ್ತರ ಕರ್ನಾಟಕದ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.
ಪಿಸಿಎಂಬಿಯಲ್ಲಿ 594 ಅಂಕ ಪಡೆದು, ಗಣಿತ, ಸಂಸ್ಕೃತ, ಜೀವಶಾಸ್ತ್ರ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ನಿರೀಕ್ಷೆ ಇತ್ತು. ಮುಂದೆ ವೈದ್ಯಕೀಯ ಶಿಕ್ಷಣದಲ್ಲಿ ಅಧ್ಯಯನ ಮಾಡಬೇಕೆಂದು ಕೊಂಡಿದ್ದೇನೆ ಎಂದರು. ವಿದ್ಯಾರ್ಥಿ ರ‍್ಯಾಂಕ್ ಪಡೆದ ಹಿನ್ನೆಲೆಯಲ್ಲಿ ಕಾರ್ಯದರ್ಶಿ ಅನೀಲಕುಮಾರ ಚೌಗಲಾ ಅವರು ಒಂದು ಲಕ್ಷ ರೂ ಚೆಕ್ ನೀಡಿ‌ ಸನ್ಮಾನಿಸಿದರು.

Previous articleದ್ವಿತೀಯ ಪಿಯು ಫಲಿತಾಂಶ: ಬಳ್ಳಾರಿ ಜಿಲ್ಲೆಗೆ 27ನೇ ಸ್ಥಾನ
Next articleಪರೀಕ್ಷೆಯಲ್ಲಿ ಫೇಲ್:‌ ವಿದ್ಯಾರ್ಥಿನಿ ಆತ್ಮಹತ್ಯೆ