ಪಟಾಕಿ ಅಬ್ಬರ, ಮೆರವಣಿಗೆಯಲ್ಲಿ ಗಣೇಶಮೂರ್ತಿ ವಿಸರ್ಜನೆ

0
17

ಹುಬ್ಬಳ್ಳಿ : ಸಾಕಷ್ಟು ಪಟಾಕಿ, ವಿವಿಧ ವಾದ್ಯವೃಂದದೊಂದಿಗೆ 5 ದಿನದ ನೂರಾರು ಗಣೇಶಮೂರ್ತಿ ವಿಸರ್ಜನೆ ರವಿವಾರ ನಡೆಯಿತು.
ಬಹುತೇಕ ಇಡಿ ನಗರವು ಪಟಾಕಿ ಸದ್ದು ಮತ್ತು ಹೊಗೆಯಿಂದ ಆವರಿಸಿತ್ತು.
ಸಂಜೆಯಿಂದಲೇ ಗಣೇಶ ವಿಸರ್ಜನೆ ಆರಂಭಗೊಂಡರು ಮಧ್ಯರಾತ್ರಿಯವರೆಗೂ ಮುಂದುವರಿದಿತ್ತು.
ವಿವಿಧ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣೇಶ ಸಮಿತಿ ಗಣೇಶ ಮೂರ್ತಿಗಳಲ್ಲದೇ, ಮನೆ ಮನೆ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಿತು.

ಟ್ರ್ಯಾಕ್ಟರ್, ಟಾಂ ಟಾಂ, ಆಟೋ, ಮಿನಿ ಲಾರಿಗಳಲ್ಲಿ, ಕಾರುಗಳಲ್ಲಿ, ದ್ವಿಚಕ್ರವಾಹನಗಳಲ್ಲಿ ಗಣೇಶಮೂರ್ತಿಗಳನ್ನು ತಂದು ವಿಸರ್ಜನೆ ಮಾಡಿದರು.
ಗಣೇಶಮೂರ್ತಿ ಸಾಗುವಾಗ ಚನ್ನಮ್ಮ ವೃತ್ತದಿಂದ ಹೊಸೂರು ವೃತ್ತದವರೆಗೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಗಣೇಶ ಸಮಿತಿ ಕಾರ್ಯಕರ್ತರು, ಭಕ್ತರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು.
ಪೊಲೀಸರು ಗಣೇಶ ವಿಸರ್ಜನೆ ಸ್ಥಳ, ಗಣೇಶ ಮೆರವಣಿಗೆ ಸಾಗುವ ಮಾರ್ಗದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

Previous articleಕೊರೊನಾ ಸೋಂಕು; ಇಬ್ಬರ ಸಾವು
Next articleಮುರುಘಾಶ್ರೀ ಪ್ರಕರಣ: 3ನೇ ಆರೋಪಿ ಅರೆಸ್ಟ್