ಬಿಜೆಪಿ ಎಂದಿಗೂ ಶೆಟ್ಟರ ಕೈ ಬಿಡುವುದಿಲ್ಲ

0
27

ಹುಬ್ಬಳ್ಳಿ: ಶೆಟ್ಟರ ಕೇವಲ ಹುಬ್ಬಳ್ಳಿ ಧಾರವಾಡದ ನಾಯಕರಲ್ಲ. ಇಡೀ ರಾಜ್ಯಕ್ಕೇ ಬೇಕಾದ ನಾಯಕ. ಕೇಂದ್ರದಿಂದ ಒಳ್ಳೆಯ ಸುದ್ದಿ ನಿರೀಕ್ಷೆ ನನಗಿದೆ ಎಂದು ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.
ಜಗದೀಶ ಶೆಟ್ಟರ ಮನೆಗೆ ಭೇಟಿ ನೀಡಿ ಮಾತನಾಡಿದ ಅವರು, ಈಗಾಗಲೇ ಶೆಟ್ಟರ ಜೊತೆ ದೆಹಲಿಗೆ ಹೋಗಿ ಬಂದಿದ್ದೇನೆ. ಅನೇಕ ನಾಯಕರು ಶೆಟ್ಟರ ಅವರಿಗೆ ಟಿಕೆಟ್ ವಿಚಾರವಾಗಿ ಭರವಸೆ ನೀಡಿದ್ದಾರೆ ಎಂದರು.

ಶೆಟ್ಟರ, ಸರಳ ಮತ್ತು ಸಜ್ಜನ ರಾಜಕಾರಣಿ. ಅವರು ಪಕ್ಷಕ್ಕೆ ಸಲ್ಲಿಸಿದ ಸೇವೆಗೆ ಗೌರವ ಸಿಕ್ಕೇ ಸಿಗುತ್ತೆ. ಶೆಟ್ಟರ ಬಂಡಾಯದ ಬಗ್ಗೆ ಯೋಚನೆಯೂ ಅಸಾಧ್ಯ. ಬಿಜೆಪಿ ಅನ್ನು ಅವರೇ ಕಟ್ಟಿ ಬೆಳೆಸಿದ್ದಾರೆ. ಹೇಗೆ ಬಂಡಾಯ ಸಾಧ್ಯ. ಬಿಜೆಪಿ ಎಂದಿಗೂ ಶೆಟ್ಟರ ಕೈ ಬಿಡುವುದಿಲ್ಲ ಎಂದರು.
ಶೆಟ್ಟರಗೆ ಟಿಕೆಟ್ ತಪ್ಪಿಸಿದ್ದು ಯಾರು ಎಂದು ಹೇಳುವುದು ಸದ್ಯ ಅಸಾಧ್ಯ ಎಂದರು.

Previous articleಸಿದ್ದಾರೂಢರಿಗೆ ಸಿಎಂ ವಿಶೇಷ ಪೂಜೆ
Next articleರಾಯಲ್-ಕ್ಯಾಪಿಟಲ್ ಫೈಟ್