ನಿವೃತ್ತಿಯಲ್ಲ ಪುನರಾರಂಭ

0
8
ಅಂಗಾರ

ಸುಳ್ಯ (ದಕ್ಷಿಣ ಕನ್ನಡ): ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದ ಶಾಸಕ ಎಸ್. ಅಂಗಾರ ಇಂದು ಸುದ್ದಿಗೋಷ್ಠಿ ನಡೆಸಿ ಮಾತಾನಡಿದ ಅವರು ಆ ಕ್ಷಣದಲ್ಲಿ ಉದ್ವೇಗದಿಂದ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದೆ. ಆದರೆ ಈಗ ನನ್ನ ಯೋಚನೆ ಹಾಗಿಲ್ಲ. ಪಕ್ಷ ನನಗೆ ಸಾಕಷ್ಟು ಅವಕಾಶ ಕೊಟ್ಟಿದೆ. ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ’ ಎಂದು ಶಾಸಕ ಎಸ್. ಅಂಗಾರ ಹೇಳಿದರು. ಸುಳ್ಯ ಮೀಸಲು ಕ್ಷೇತ್ರದಿಂದ ಆರು ಬಾರಿ ಆಯ್ಕೆಯಾಗಿದ್ದ ಅಂಗಾರ ಅವರು, ಬಿಜೆಪಿ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ, ‘ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನಾನು ಇನ್ನು ರಾಜಕಾರಣದಲ್ಲೂ ಇಲ್ಲ, ಚುನಾವಣಾ ಕಣದಲ್ಲೂ ಇಲ್ಲ. ಹೊಸ ಅಭ್ಯರ್ಥಿ ಮತ್ತು ಅವರ ಗೆಲುವನ್ನು ಪಕ್ಷ ನೋಡಿಕೊಳ್ಳಬಹುದು’ ಎಂದು ಹೇಳಿದ್ದರು. ಇಂದು ಅವರು, ಬಿಜೆಪಿ ಗೆಲುವು ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ಅಭ್ಯರ್ಥಿ ಭಾಗೀರಥಿ ಮುರುಳ್ಯ ಗೆಲುವಿಗೆ ಶ್ರಮಿಸುತ್ತೇನೆ ಮತ್ತು ಗೆಲುವಿನ ಜವಬ್ಧಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ’ ಎಂದಿದ್ದಾರೆ.

Previous articleನಾಲ್ಕು ಜನ ಹೋದರೆ ಏನೂ ನಷ್ಟ ಆಗಲ್ಲ
Next articleಬಿಜೆಪಿಗೆ ಮಾಜಿ ಡಿಸಿಎಂ ರಾಜೀನಾಮೆ