ಎಂಪಿ ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ

0
13
ಕುಮಾರಸ್ವಾಮಿ

ಶಿರಸಿ: ಮೂಡಿಗೆರೆ ಕ್ಷೇತ್ರದ ಶಾಸಕ ಎಂಪಿ ಕುಮಾರಸ್ವಾಮಿ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಆಗಮಿಸಿದ್ದು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿಗ ಎಂಪಿ.ಕುಮಾರಸ್ವಾಮಿಯವರು, ಬಿಜೆಪಿ ನಾಯಕರ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ನಾಯಕರೇ ಇಲ್ಲ. ಪ್ರಧಾನಿ ಮೋದಿ, ಅಮಿತ್ ಶಾ ಅವರೇ ಬಂದು ಗೊಂದಲ ಬಗೆ ಹರಿಸುವ ಸ್ಥಿತಿ ಬಂದಿದೆ ಎಂದು ಕಿಡಿಕಾರಿದರು. ಒಳ್ಳೆತನಕ್ಕೆ ಜಯ ಸಿಗುತ್ತದೆ. ಬಿಜೆಪಿಯಲ್ಲಿ ನನಗಿಷ್ಟು ಹಂಚಿಕೊಂಡಾಗ ಮಾನದಂಡ ಎಲ್ಲಿ ಬರುತ್ತದೆ. ಯಡಿಯೂರಪ್ಪ ಅವರು ಮೊಬೈಲ್​ ಸ್ವಿಚ್​ ಆಫ್ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ 50-70 ಸ್ಥಾನ ಬಿಜೆಪಿದು ದಾಟಲ್ಲ. ನನಗೆ ಟಿಕೆಟ್ ತಪ್ಪಲು ಸಿ.ಟಿ.ರವಿ ಅವರು ಕಾರಣ. ಹುಚ್ಚನಾಯಿ ತರ ಸೀಟಿ ಹೊಡೆಸಿ ಓಡಿಸಿದಂತೆ ಅಟ್ಟಿಸಿಕೊಂಡು ಪಕ್ಷದಿಂದ ಓಡಿಸಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

Previous articleಗೆಲ್ಲುವ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚು
Next articleಕಾಂಗ್ರೆಸ್ ಮುಖಂಡರೊಂದಿಗೆ ಲಕ್ಷ್ಮಣ ಸವದಿ