ಸಿ.ಟಿ. ರವಿ ವಿರುದ್ಧ ಪೋಸ್ಟ್‌ ಮಾಡಿದ್ದವರ ವಿರುದ್ಧ FIR

0
8
C T Ravi

ಚಿಕ್ಕಮಗಳೂರು: ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಉಂಟುಮಾಡಿದ್ದ ಲಿಂಗಾಯತ ಸಮುದಾಯದ ವಿರುದ್ಧ ಸಿ.ಟಿ. ರವಿ ಹೇಳಿಕೆ ಪೋಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಎಫ್ಐಆರ್‌ ದಾಖಲಾಗಿದೆ.
ದಾವಣಗೆರೆಯ ಹರೀಶ್, ಗುರು ಪಾಟೀಲ್, ತುಮಕೂರಿನ ಸುವರ್ಣಗಿರಿ ಎನ್ನುವವರ ವಿರುದ್ಧ ನಗರದ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ತಿಂಗಳು ಪತ್ರಿಕೆಯಲ್ಲಿ ಸಿ.ಟಿ ರವಿ ಹೇಳಿಕೆ ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗಿತ್ತು. ಈ ಕುರಿತಂತೆ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರಡಪ್ಪ ತನಿಖೆ ನಡೆಸುವಂತೆ ಎಸ್ಪಿಗೆ ದೂರು ಸಲ್ಲಿಸಿದ್ದರು.

FIR
Previous articleಬಿಜೆಪಿ ಅಭ್ಯರ್ಥಿಗಳ ನಕಲಿ ಪಟ್ಟಿ ಬಿಟ್ಟವರ ವಿರುದ್ಧ ಕ್ರಮ: ಅರುಣ ಸಿಂಗ್‌
Next articleಸಮಯ ಪ್ರಜ್ಞೆ ಮೆರೆದ ವೃದ್ಧೆ; ತಪ್ಪಿದ ಸಂಭಾವ್ಯ ರೈಲು ಅವಘಡ