ಆದಿ ಜಗದ್ಗುರು ಪಂಚಾಚಾರ್ಯ ಪಾಠಶಾಲೆ ಅಭಿವೃದ್ಧಿಗೆ ಬೆಂಬಲ

0
22
CM

ಹಾವೇರಿ: ಆದಿ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಗೀತ ಪಾಠಶಾಲೆಗೆ ಅನುದಾನ ಮಂಜೂರಾತಿ ಮಾಡಿದ್ದು, ಆದಷ್ಟು ಬೇಗನೆ ಬಿಡುಗಡೆ ಮಾಡಿ ಗೋಶಾಲೆಗಳಿಗೆ ಸಹಾಯ ಮಾಡಲಾಗುವುದು, ಮಠದ ಅಭಿವೃದ್ಧಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಅವರು ಇಂದು ಶಿಗ್ಗಾಂವಿಯ ಶ್ರೀ ಆದಿ‌ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ,‌ ಸಂಗೀತ ಮತ್ತು ಯೋಗ ಪಾಠಶಾಲೆಯ* ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮಕ್ಕಳಿಗೆ ವೇದ, ಆಗಮ ಕಲಿಸುವ ಮೂಲಕ ನಮ್ಮ ಸಂಪ್ರದಾಯ, ಸಂಸ್ಕೃತಿ ಯನ್ನು, ಆಧ್ಯಾತ್ಮಿಕ ಚಿಂತನೆಯನ್ನು ಮುಂದಿನ ಮಠ ಜನಾಂಗಕ್ಕೆ ಕಲಿಸುತ್ತಿದೆ. ಆದಿ ಗುರು ರೇಣುರಾಚಾರ್ಯರು ಸ್ಥಾಪಿಸಿದ ಪಂಚಪೀಠಗಳು ನಾಡಿನ ಕಲ್ಯಾಣಕ್ಕಾಗಿ ಅಭೂತಪೂರ್ವ ಕೆಲಸ ಮಾಡುತ್ತಿದೆ. ವೀರಶೈವರ ಸಮಗ್ರ ಅಭಿವೃದ್ಧಿಗಾಗಿ ಅವರ ಚಿಂತನೆ ಹಾಗೂ ಪಯಣ, ಆಶೀರ್ವಾದ ಸಮುದಾಯದ ಮೇಲೆ ಸದಾ ಕಾಲ ಇರಲಿ ಎಂದರು.
ಜಂಗಮ ಮಠ ಉತ್ತಮವಾಗಿ ಬೆಳೆದಿದೆ

ಕಾಶಿ ಜಗದ್ಗುರುಗಳು ಮೇಧಾವಿಗಳು, ಜ್ಞಾನ ಭಂಡಾರವಾಗಿದ್ದರೂ ತೋರಿಸಿಕೊಳ್ಳದೆ ಕೆಲಸ ಮಾಡುತ್ತಿದ್ದಾರೆ. ಮಠದ ಶ್ರೇಯೋಭಿವೃದ್ಧಿಗೆ ಮೊದಲಿನಿಂದಲೂ ತೊಡಗಿಸಿಕೊಂಡಿದ್ದು ಜಂಗಮ ಮಠ ಉತ್ತಮವಾಗಿ ಬೆಳೆದಿದೆ ಎಂದರು. ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಶಿವರಾಂ ಹೆಬ್ಬಾರ್ , ಶಂಕರ ಪಾಟೀಲ ಮುನೇನಕೊಪ್ಪ ಮತ್ತಿತರರು ಉಪಸ್ಥಿತರಿದ್ದರು.

Previous articleರಂಗ್‌ದೇ ಬರ್ಸಾ ಡಿಜೆ ಪಾರ್ಟಿ ವೇಳೆ ದಾಳಿ
Next articleಸೀಟ್ ವಿಚಾರದಲ್ಲಿ ಕಾಂಗ್ರೆಸ್‌ನಿಂದ ಬಿಲ್ಲವ ಸಮುದಾಯಕ್ಕೆ ಅನ್ಯಾಯ