ಮಾತಲ್ಲಿ ಮೋದಿ ಕಪಾಳಮೋಕ್ಷ

0
27
narendra modi

ದಾವಣಗೆರೆ: ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತ ನನ್ನ ಮಿತ್ರನಿದ್ದಂತೆ. ಬಿಜೆಪಿಯಲ್ಲಿ ಯಾರೂ ಸಣ್ಣವರಲ್ಲ.. ಯಾರೂ ದೊಡ್ಡವರಲ್ಲ.. ನಮಗೆ ಎಲ್ಲರೂ ಒಂದೇ. ಆದರೆ ಪ್ರತಿಪಕ್ಷದ ನಾಯಕರೊಬ್ಬರು ಕಪಾಳಮೋಕ್ಷ ಮಾಡಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೆಸರು ಪ್ರಸ್ತಾಪಿಸದೇ ಸಿದ್ದರಾಮಯ್ಯ ವಿರುದ್ಧ ಗುಡುಗಿದರು.

ವಿಜಯ ಸಂಕಲ್ಪ ಯಾತ್ರೆಯ ಮಹಾಸಂಗಮ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮದೇ ಪಕ್ಷದ ಕಾರ್ಯಕರ್ತರನ್ನು ಗೌರವಿಸದವರು ಜನರ ಹೇಗೆ ನೋಡುತ್ತಾರೆ ಎಂದರು. ಇನ್ನು ಕಲಬುರ್ಗಿ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಕಾಂಗ್ರೆಸ್​ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರಲ್ಲೇ ಬಿಜೆಪಿ ಗೆಲುವು ಸಾಧಿಸಿದೆ. ಇದು ವಿಜಯ ಯಾತ್ರೆಯ ಆರಂಭ. ವಿಜಯ ಸಂಕಲ್ಪ ಇಲ್ಲಿಂದಲೇ ಶುರುವಾಗಿದೆ ಎಂದರು.

ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ರೀತಿ ನೋಡುತ್ತಿದೆ. ಕಾಂಗ್ರೆಸ್‌ ಎಂದೂ ಕರ್ನಾಟಕದ ಅಭಿವೃದ್ಧಿಗೆ ಸಂಕಲ್ಪ ಮಾಡಿಲ್ಲ. ಮೋದಿ ಸಮಾಧಿ ಕಟ್ಟುವುದರಲ್ಲಿ ಸಂಕಲ್ಪ ಮಾಡಿದ್ದಾರೆ. ಇಂತಹ ಕಾಂಗ್ರೆಸ್ ನಮಗೆ ಬೇಕೆ ಎಂದು ನೆರೆದವರನ್ನು ಮೋದಿ ಪ್ರಶ್ನೆ ಮಾಡಿದರು. ಕರ್ನಾಟಕ ಸೇವೆಗೆ ನಾನು ಬದ್ಧನಾಗಿದ್ದೇನೆ. ಕರ್ನಾಟಕದ ಅಭಿವೃದ್ಧಿಗಾಗಿ ಬಿಜೆಪಿಗೆ ಬಹುಮತ ನೀಡುವ ಕಾಲ ಬಂದಿದೆ’ ಎಂದರು.

Previous articleಪ್ರಧಾನಿ ಮೋದಿ ಹಾಡಿ ಹೊಗಳಿದ ಬೊಮ್ಮಾಯಿ
Next articleಚಿಗರಿ ಬಸ್ ಡಿಕ್ಕಿ, ಮೂವರಿಗೆ ಗಾಯ