ಕಾರ್ಕಳ – ಭ್ರಷ್ಟಾಚಾರದ ದಾಖಲೆ ಪ್ರಧಾನಿ ನರೇಂದ್ರ ಮೋದಿಗೆ

0
10
ಮುತಾಲಿಕ

ಕಾರ್ಕಳ: ಕಾರ್ಕಳದಲ್ಲಿ ನಡೆಯುತ್ತಿರುವ ಎಲ್ಲಾ ಭ್ರಷ್ಟಾಚಾರದ ದಾಖಲೆಗಳನ್ನು ಪ್ರಧಾನಿ ನರೇಂದ್ರ ಮೋದಿಗೆ ಭೇಟಿಯಾಗಿ ದೂರು ನೀಡಲಾಗುವುದು ಎಂದು ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಕಾರ್ಕಳ ತಾಲೂಕಿನ ನಕ್ರೆ ಪರಪು ಸಮೀಪದ ಪಾಂಚಜನ್ಯಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆ ಗೊಳಿಸಿ ಮಾತನಾಡಿದರು.
ಪೊಟ್ಟುಕೆರೆ ಅಬಿವೃದ್ಧಿಗೆ ಕಣಂಜಾರು ಸಮೀಪದ ಕೊಡಿಲುಕಟ್ಟೆ ಎಂಬಲ್ಲಿ ಹತ್ತು ಸಾವಿರ ರೂಪಾಯಿ ಕೆಲಸಕ್ಕೆ ಮಾಡಿ ಸರಕಾರದಿಂದ ಹತ್ತು ಲಕ್ಷ ರೂಪಾಯಿ ಬಿಲ್ ಮಾಡಲಾಗಿದ್ದು ಮತ್ತೆ ಹದಿನೈದು ಲಕ್ಷ ರೂಪಾಯಿ ಗೆ ಬೇಡಿಕೆ ಸಲ್ಲಿಸಲಾಗಿದೆ ಬೋಗಸ್ ಕೆಲಸದಲ್ಲಿ ಲಕ್ಷ ಲಕ್ಷ ಲೂಟಿ ಮಾಡಲಾಗಿದೆ ಈ ಮೂಲಕ ಸುನೀಲ್ ಭ್ರಷ್ಟಾಚಾರ ಮೇಲುನೋಟಕ್ಕೆ ಸಾಬೀತಾಗಿದೆ ಎಂದು ಮುತಾಲಿಕ್ ಹೇಳಿದರು.
ಎರಡನೇ ದಾಖಲೆ ಬಿಡುಗಡೆ ಗೊಳಿಸಿದ ಮುತಾಲಿಕ್ ಪುರಾತನ ಊರಿಗೆ ನೀರುಣಿಸುತಿದ್ದ ಜಡ್ಡಿನಕಟ್ಟೆ ಕೆರೆಯನ್ನು ಮುಚ್ಚಿ ತೀರ್ಥಹಳ್ಳಿಯ ಷರೀಫ್ ಅಕ್ರಮ ಕ್ರಷರ್ ಮಾಡುತಿದ್ದರು ಅದನ್ನು ಮನಗಂಡು ಸಂಘಟನೆ ಪ್ರಮುಖರಾದ ದಿವ್ಯಹಾಗು ಇತರರ ಹೋರಾಟದ ಫಲವಾಗಿ ಗಣಿಗಾರಿಕೆನಿಲುಗಡೆಯಾಗಿದೆ. ಈಗ ಸ್ಥಾಪಿತಬಹಿತಾಸಕ್ತರ ಕುಮ್ಮಕ್ಕಿನಿಂದ ಆ ಗಣಿಗಾರಿಕೆ ಆರಂಭಕ್ಕೆ ತಯಾರಿ ನಡೆಸಲಾಗುತ್ತಿದೆ. ಇದಕ್ಕೆ ಸಚಿವರ ಒತ್ತಡವೇ ಕಾರಣವಾಗಿದೆ .
ನೀರೆ ಬೈಲೂರಿನಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಗೆ ಅಂದಿನ ತಹಶೀಲಾರ್ ಹಾಗೂ ಉಪತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ ಇಲಾಕೆಯು ದಾಖಲಿ ನಡೆಸಿ ಕಲ್ಲುತುಂಬಿದ ಎರಡು ಲಾರಿಗಳನ್ನು ವಶಪಡಿಸಿ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಇದಾದ ಕೆಲ ಹೊತ್ತಿನಲ್ಲಿ ರಾಜಕೀಯ ಪ್ರಭಾವ ಬಳಸಿಕೊಂಡು ಆ ಎರಡು ಲಾರಿಗಳನ್ನು ಬಿಡುಗಡೆಗೊಳಿಸಲಾಗಿತ್ತು. ಈ ಎಲ್ಲಾ ಬೆಳವಣಿಯ ಬೆನ್ನಲ್ಲೇ ಜಿಲ್ಲಾಡಳಿತವು ಆ ಉಪತಹಶೀಲ್ದಾರ್ ಅವರನ್ನು ಕಾಪುವಿಗೆ ವರ್ಗಾವಹಿಸಿದ್ದರು. ಇದು ಕಾನೂನು ಸಮ್ಮತವಲ್ಲ. ಅದೇ ಉಪತಹಶೀಲ್ದಾರ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ ಎಂದರು.
ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೇಂದ್ರ ಸರಕಾರದ ಜಲಜೀವನ್ ಯೋಜನೆ ದುರುಪಯೋಗವಾಗಿದೆ. ರೂ. ೩೫ ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಟ್ಯಾಂಕಿನ ಕಳಪೆ ಕಾಮಗಾರಿಯಿಂದಾಗಿ ಒಂದು ಹನಿ ನೀರು ನಿಲ್ಲದೇ ಇದೀಗ ಟ್ಯಾಂಕ್ ದುರಸ್ಥಿ ನೆಪದಲ್ಲಿ ನೆಲಸಮ ಗೊಳಿಸುವ ಪ್ರಯತಗ್ನಗಳು ನಡೆಯುತ್ತಿದೆ. ಅಲ್ಲಿ ನಡೆದಿರುವ ಕಳಪೆ ಕಾಮಗಾರಿಯ ರೂವಾರಿಯಾಗಿರುವ ಗುತ್ತಿಗೆದಾರನೇ ಆ ಹಣವನ್ನು ಭರಿಸಿಸಬೇಕೆಂದು ಒತ್ತಾಯಿಸಿದರು.
ಭಾರತೀಯ ಪುರಾತತ್ವ ಸರ್ವೇ ಕ್ಷಣ ಇಲಾಖೆಯ ವ್ಯಾಪ್ತಿಯೊಳಪಟ್ಟ ಧಾರ್ಮಿಕ ಕ್ಷೇತ್ರ ೧೫೦ ಮೀಟರ್ ಪರಿಧಿಯೊಳಗೆ ಬಹುಮಹಡಿ ಕಟ್ಟೆಡ ನಿರ್ಮಾಣವಾಗುತ್ತಗಿದ್ದು, ಕಾರ್ಕಳ ಪುರಸಭೆಯಿಂದ ನಾಲ್ಕು ಬಾರಿ ನೋಟೀಸ್ ಜಾರಿಗೊಂಡರೂ ಇದು ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

Previous articleರಾಹುಲ್ ಅನರ್ಹತೆ – ಪ್ರಜಾಪ್ರಭುತ್ವದ ಕಗ್ಗೊಲೆ
Next articleಭಯೋತ್ಪಾದಕರ ಬಗ್ಗೆ ಕಾಂಗ್ರೆಸ್‌ಗೆ ಅನುಕಂಪ