ವಿವಾದಾತ್ಮಕ ಸ್ಥಳದಲ್ಲಿ ಬೆಳಿಗ್ಗೆಯೇ ಗಣೇಶ ಪ್ರತಿಷ್ಠಾಪನೆ

ಹುಬ್ಬಳ್ಳಿ :ಚನ್ನಮ್ಮ ವೃತ್ತದ ಬಳಿಯ ಪಾಲಿಕೆಯ ವಿವಾದಿತ ಸ್ಥಳದಲ್ಲಿ ಬುಧವಾರ ಕಿತ್ತೂರು ರಾಣಿ ಚನ್ನಮ್ಮ ಗಜಾನನ ಮಹಾಮಂಡಳಿಯು ಬೆಳಿಗ್ಗೆ 7.30ಕ್ಕೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿತು.
ಸಮಿತಿಯು ಪೂರ್ವ ಘೋಷಣೆ ಪ್ರಕಾರ ಮಧ್ಯಾಹ್ನ 1 ಗಂಟೆಗೆ ಮೂರುಸಾವಿರಮಠದಿಂದ ಗಣೇಶಮೂರ್ತಿ ಮೆರವಣಿಗೆಯಲ್ಲಿ ಕರೆತಂದು ಪ್ರತಿಷ್ಟಾಪನೆ ಮಾಡಬೇಕಿತ್ತು. ಆದರೆ, ಅದಕ್ಕೂ ಮುಂಚಿತವಾಗಿ ಬೆಳಿಗ್ಗೆ 7.30 ಕ್ಕೆ ಚಿಕ್ಕ ಗಣೇಶಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ನೆರವೇರಿಸಿದೆ.
ಅಲ್ಲದೇ ಮಧ್ಯಾಹ್ನ 1 ಗಂಟೆಗೆ 4 ಅಡಿ ಎತ್ತರದ ಗಣೇಶಮೂರ್ತಿಯನ್ನು ಮೂರುಸಾವಿರಮಠದಿಂದ ಮೆರವಣಿಗೆಯಲ್ಲಿ ಕರೆತಂದು ಪ್ರತಿಷ್ಠಾಪಿಸುವುದಾಗಿ ಸಮಿತಿಯು ತಿಳಿಸಿದೆ.