ಕಪ್ಪತ್ತಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ, ಆತಂಕದಲ್ಲಿ ಜನತೆ

0
19
ಚಿರತೆ

ಗದಗ(ಮುಂಡರಗಿ): ಗಿಡಮೂಲಿಕೆಗಳ ಔಷಧಿ ತಾಣ ಸಾವಿರಾರು ಹೆಕ್ಟೇರ್ ಅರಣ್ಯ ಹೊಂದಿರುವ ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಸೋಮವಾರ ಸಾಯಂಕಾಲ ಸಾರ್ವಜನಿಕರಿಗೆ ಚಿರತೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರು ಪ್ರವಾಸಿಗರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಡಂಬಳ ಹೋಬಳಿ ಡೋಣಿ ಗ್ರಾಮದ ಹತ್ತಿರದ ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಸಾರ್ವಜನಿಕರಿಗೆ ಚಿರತೆ ಪ್ರತ್ಯಕ್ಷವಾಗಿದ್ದರಿಂದ ಡೋಣಿ, ಡೋಣಿತಾಂಡ, ದಿಂಡೂರ, ಅತ್ತಿಕಟ್ಟಿ, ಸುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.
ಈ ಕುರಿತು ಮಾಹಿತಿ ನೀಡಿದ ವಲಯ ಅರಣ್ಯಾಧಿಕಾರಿ ವೀರಣ್ಣ ಮರಿಬಸಣ್ಣವರ, ಕಳೆದ ಹಲವು ವರ್ಷದಿಂದ ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಮೂರು ಚಿರತೆಗಳು ವಾಸ ಮಾಡುತ್ತಿದ್ದು, ಸಾರ್ವಜನಿಕರು ಆತಂಕ, ಭಯ ಪಡಬಾರದು. ಸಾರ್ವಜನಿಕರು ಕಾಡಿಗೆ ಹೋಗದೆ ಜಾಗೃತಿ ವಹಿಸಬೇಕು. ಚಿರತೆ ಪತ್ತೆ ಹಚ್ಚುವಲ್ಲಿ ನಮ್ಮ ಇಲಾಖೆಯು ನಿಗಾವಹಿಸುತ್ತದೆ ಎನ್ನುತ್ತಾರೆ.

Previous articleಉರಿಗೌಡ, ನಂಜೇಗೌಡ ಹೆಸರಲ್ಲಿ ಆಧಾರ್ ಕಾರ್ಡ್
Next articleಕಾಂಗ್ರೆಸ್‌ನಿಂದ ಬೋಗಸ್ ಕಾರ್ಡ್‌ಗಳ ಬಿಡುಗಡೆ ಸರಣಿ