ಬೆಳಗಾವಿ ಕಣಬರಗಿ ಚೆಕ್ ಪೋಸ್ಟ್: 1.77 ಲಕ್ಷ ರೂ. ನಗದು ಜಪ್ತಿ

0
12
ಹಣ

ಬೆಳಗಾವಿ: ಕಣಬರಗಿ ಚೆಕ್‌ಪೋಸ್ಟ್‌ನಲ್ಲಿ ಫ್ಲೈಯಿಂಗ್ ಸ್ಕ್ವಾಡ್ ತಂಡವು ಭಾನುವಾರ 1.77 ಲಕ್ಷ ರೂಪಾಯಿ ಜಪ್ತಿ ಮಾಡಿಕೊಂಡಿದೆ.
ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣಾ ಸಂದರ್ಭದಲ್ಲಿ ನಗದು ಪತ್ತೆಯಾಗಿದೆ. ಈ ಹಣವನ್ನು ಜಿಲ್ಲಾ ಖಜಾನೆಯಲ್ಲಿ ಜಮೆ ಮಾಡಲಾಗಿದ್ದು, ಪಂಚಾಯತ ಮುಖ್ಯ ಕಾರ್ಯನಿರ್ವಾಹಕರು ಅಧ್ಯಕ್ಷರಾಗಿರುವ ತ್ರಿಸದಸ್ಯ ಸಮಿತಿಗೆ ಪ್ರಕರಣ ವರ್ಗಾಯಿಲಾಗಿದೆ.
ಚುನಾವಣಾಧಿಕಾರಿ ಅಕ್ರಮ್ ಇಂಫಾಲ್, ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ, ಎಫ್‌ಎಸ್‌ಟಿ ತಂಡದ ಮುಖ್ಯಸ್ಥ ಪ್ರವೀಣ ಕೊರಬು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Previous articleಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಗೋಯಲ್‌ ಮೆಚ್ಚುಗೆ
Next articleನಾವು ಬಿಜೆಪಿ ಬಂಡುಕೋರರಲ್ಲ, ಬಿಜೆಪಿಯಲ್ಲಿದ್ದು ಟಿಕೆಟ್ ಕೇಳುತ್ತಿದ್ದೇವೆ