ಸಿದ್ದರಾಮಯ್ಯ ಅಲ್ಲ, ರಾಹುಲ್‌ ಗಾಂಧಿ ಬಂದ್ರೂ ಭಯ ಇಲ್ಲ..!

0
15
ವರ್ತೂರ್‌ ಪ್ರಕಾಶ

ಕೋಲಾರ: ಸಿದ್ದರಾಮಯ್ಯ ಅಲ್ಲ ರಾಹುಲ್ ಗಾಂಧಿನೇ ಬರಲಿ ನನಗೆ ಯಾವುದೇ ರೀತಿಯ ಭಯವಿಲ್ಲ, ನನ್ನ ಗೆಲುವು ಮೊದಲೇ ನಿಶ್ಚಿತವಾಗಿದೆ ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ ಹೇಳಿದ್ದಾರೆ.
ಸಿದ್ದರಾಮಯ್ಯನವರು ಕೋಲಾರದಲ್ಲಿ ಸ್ಪರ್ಧೆ ಬೇಡ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅವರು, ಕೋಲಾರದಲ್ಲಿ ಸ್ಪರ್ಧಿಸಿದರೆ ಹಿನ್ನಡೆ ಸಿದ್ದರಾಮಯ್ಯನವರಿಗೆ ಹಿನ್ನಡೆ ಎಂಬ ಅಂಶವನ್ನು ಆಂಧ್ರಪ್ರದೇಶದ ಖಾಸಗಿ ಏಜೆನ್ಸಿ ಸರ್ವೆ ನಡೆಸಿ ಆ ವರದಿಯನ್ನ ರಾಹುಲ್ ಗಾಂಧಿ ಅವರಿಗೆ ತಿಳಿಸಿದೆ. ನಾನು ಒಂದು ವರ್ಷದಿಂದ ಕೋಲಾರದಲ್ಲಿ ಬೂತ್ ಮಟ್ಟದಿಂದ ಬಿಜೆಪಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಶೇ. 75ರಷ್ಟು ಬಿಜೆಪಿ ಕಾರ್ಯಕರ್ತರು ಇದ್ದಾರೆ. ಶೇ. 90ರಷ್ಟು ಕಾಂಗ್ರೆಸ್ ಪಕ್ಷಕ್ಕೆ ಬೂತ್ ಏಜೆಂಟರೇ ಇಲ್ಲ ಹೀಗಿರುವಾಗ ಕಾಂಗ್ರೆಸ್‌ಗೆ ಗೆಲುವು ಎಲ್ಲಿಂದ ಸಾಧ್ಯ. ಮೈಸೂರಿನ ಟಗರು ಆಟ ಕೋಲಾರದಲ್ಲಿ ನಡೆಯುವುದಿಲ್ಲ ಎಂದರು.

Previous articleದುಗ್ಗಮ್ಮ ಜಾತ್ರೆ ರೀತಿ ಬಿಜೆಪಿ ಸಮಾವೇಶ: ಪ್ರಧಾನ್
Next article27ರಂದು ಅಂತಿಮ ತೀರ್ಮಾನ ಎಂದ ಲಕ್ಷ್ಮಣ ಸವದಿ