Home ನಮ್ಮ ಜಿಲ್ಲೆ ಕೊಡಗು ಮಾಸ್ಟರ್‌ಗೇಮ್ಸ್‌ನಲ್ಲಿ ಕೊಡಗಿನ ಹಿರಿಯ ಕ್ರೀಡಾಪಟುಗಳಿಗೆ ಪದಕ

ಮಾಸ್ಟರ್‌ಗೇಮ್ಸ್‌ನಲ್ಲಿ ಕೊಡಗಿನ ಹಿರಿಯ ಕ್ರೀಡಾಪಟುಗಳಿಗೆ ಪದಕ

0
137
ಮಡಿಕೇರಿ

ಮಡಿಕೇರಿ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ ಮಾಸ್ಟರ್‌ಗೇಮ್ಸ್ ಚಾಂಪಿಯನ್ ಶಿಪ್‌ನಲ್ಲಿ ಕೊಡಗಿನ ಮೂವರು ಹಿರಿಯ ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಿ ಒಟ್ಟು ೫ ಪದಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಗೋಣಿಕೊಪ್ಪ ಹಾಗೂ ಕದನೂರು ಗ್ರಾಮಗಳ ನಿವಾಸಿ ಸಹೋದರರಾದ ಪಾಲೆಕಂಡ ಬೆಳ್ಳಿಯಪ್ಪ ಹಾಗೂ ಪಾಲೆಕಂಡ ಬೋಪಯ್ಯ ಅವರು ಭಾರತವನ್ನು ಪ್ರತಿನಿಧಿಸಿ ತಲಾ ಎರಡು ಪದಕಗಳನ್ನು ಪಡೆದಿದ್ದಾರೆ.
ಪಾಲೆಕಂಡ ಬೋಪಯ್ಯ ಅವರು ಜಾವಲಿನ್ ಥ್ರೋ ಹಾಗೂ ಡಿಸ್ಕಸ್ ಥ್ರೋನಲ್ಲಿ ಹಾಗೂ ಬೆಳ್ಳಿಯಪ್ಪ ಅವರು ೧೦೦, ೨೦೦, ೧೫೦೦ ಮೀಟರ್ ಕಾಲ್ನಡಿಗೆ ರೇಸ್‌ನಲ್ಲಿ ಭಾಗವಹಿಸಿದ್ದರು.
ಮಾಸ್ಟರ್‌ಗೇಮ್ಸ್‌ನಲ್ಲಿ ಬಿಎಸ್‌ಎನ್‌ಎಲ್‌ನ ನಿವೃತ್ತ ಉದ್ಯೋಗಿ, ಕರ್ನಾಟಕದ ಮಾಸ್ಟರ್ಸ್ ಕ್ರೀಡಾಕೂಟ ಸಂಘದ ಅಧ್ಯಕ್ಷೆ ಮಾರಮಡ ಮಾಚಮ್ಮ ಅವರು ಕೂಡ ಭಾಗವಹಿಸಿ ಪದಕ ಗಳಿಸಿದ್ದಾರೆ.