ಆಸ್ಕರ್​ ಗೌರವ ಪಡೆದ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ

0
8
ಆಸ್ಕರ್‌

ಭಾರತಕ್ಕೆ ಈ ಬಾರಿ ಎರಡು ಪ್ರಶಸ್ತಿಗಳು ಆಸ್ಕರ್ ಲಭಿಸಿವೆ. ನಾಟು ನಾಟು ಸಾಂಗ್​ ಕುರಿತು ಟ್ವೀಟ್​ ಮಾಡಿರುವ ಪ್ರಧಾನಿ, “ಆರ್‌ ಆ‌ರ್ ಆರ್ ಸಿನಿಮಾದ ‘ನಾಟು ನಾಟು’ ಗೀತೆಯ ಜನಪ್ರಿಯತೆ ಜಾಗತಿಕವಾಗಿ ವ್ಯಾಪಿಸಿದೆ. ಮುಂದಿನ ವರ್ಷಗಳಲ್ಲಿ ಎಲ್ಲರ ನೆನಪಿನಲ್ಲಿ ಉಳಿಯುವ ಹಾಡು ಇದಾಗಿದೆ. ಪ್ರತಿಷ್ಟಿತ ಆಸ್ಕರ್​ ಗೌರವ ಪಡೆದ ಇಡೀ ಚಿತ್ರ ತಂಡಕ್ಕೆ ಅಭಿನಂದನೆಗಳು. ಇದು ಭಾರತವೇ ಹೆಮ್ಮೆಪಡುವ ಸಾಧನೆ” ಎಂದು ಕೊಂಡಾಡಿದ್ದಾರೆ. ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ ಹಾಗೂ ಗುನೀತ್ ಮೊಂಗಾ ನಿರ್ಮಾಣದ ‘ದ ಎಲಿಫೆಂಟ್‌ ವಿಸ್ಪರರ್ಸ್‌’ ಆಸ್ಕರ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ಕುರಿತು ಸಹ ಟ್ವೀಟ್​ ಮಾಡಿರುವ ಮೋದಿ, ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. “ಈ ಕಿರು ಸಾಕ್ಷ್ಯಚಿತ್ರದ ಮೂಲಕ ಸುಸ್ಥಿರ ಅಭಿವೃದ್ಧಿ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಬಗೆಗಿನ ಪ್ರಾಮುಖ್ಯತೆಯನ್ನು ಅದ್ಭುತವಾಗಿ ತೋರಿಸಲಾಗಿದೆ” ಎಂದು ಹೇಳಿದ್ದಾರೆ.

Previous articleವಿ. ಸೋಮಣ್ಣ ನಮ್ಮ ಜೊತೆ ಇರುತ್ತಾರೆ
Next articleಸಂಸತ್‍ನಲ್ಲಿ ಗದ್ದಲ: ಕಲಾಪ ಮುಂದೂಡಿಕೆ