ನವದೆಹಲಿ: ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಮತ್ತು ಅವರ ಕುಟುಂಬ ಸದಸ್ಯರ ಸ್ಥಳಗಳಲ್ಲಿ ಶೋಧ ನಡೆಸಿದ ಒಂದು ದಿನದ ನಂತರ ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ತನ್ನ ತನಿಖಾಧಿಕಾರಿಗಳು 1 ಕೋಟಿ ರೂಪಾಯಿ ನಗದು ಮತ್ತು 600 ಕೋಟಿ ರೂಪಾಯಿ ಮೌಲ್ಯದ ಅಕ್ರಮ ವಹಿವಾಟನ್ನು ಪತ್ತೆ ಹಚ್ಚಿದೆ. ಉದ್ಯೋಗಕ್ಕಾಗಿ ಭೂ ಹಗರಣ ಸಂಬಂಧ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಕುಟುಂಬದ ಮೇಲೆ ದಾಳಿ ನಡೆಸಿದ ನಂತರ 1 ಕೋಟಿ ರೂ. ನಗದು ಮತ್ತು 1900 ಅಮೆರಿಕನ್ ಡಾಲರ್ ವಿದೇಶಿ ಕರೆನ್ಸಿ, 1.5 ಕೆಜಿಗೂ ಹೆಚ್ಚಿನ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಶನಿವಾರ ಹೇಳಿದೆ.
24 ಕಡೆಗಳಲ್ಲಿ ದಾಳಿ ನಡೆದಿದ್ದು, ಒಟ್ಟಾರೇ ಲೆಕ್ಕವಿಲ್ಲದ 600 ಕೋಟಿ ರೂ. ಆದಾಯ ಪತ್ತೆ ಮಾಡಲಾಗಿದೆ. ಲಾಲೂ ಪ್ರಸಾದ್ ಕುಟುಂಬ ಮತ್ತು ಅವರ ಸಹಚರರ ಪರವಾಗಿ ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಹೆಚ್ಚಿನ ಹೂಡಿಕೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಇಡಿ ತಿಳಿಸಿದೆ.