ನಾಳೆ ಬೆಂಗಳೂರು-ಮೈಸೂರು ದಶಪಥ ರಸ್ತೆ ಲೋಕಾರ್ಪಣೆ

0
11

ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿ ಉದ್ಪಾಟನೆಗೆ ನಾಳೆ (ಮಾ.12) ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಮಂಡ್ಯಕ್ಕೆ ಆಗಮಿಸಲಿದ್ದಾರೆ. ಬೆಳಿಗ್ಗೆ 11.20 ಕ್ಕೆ ಪಿಇಎಸ್ ಕಾಲೇಜು ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ನಂತರ 11.25 ಕ್ಕೆ ಪ್ರವಾಸಿಮಂದಿರ ವೃತ್ತದಿಂದ ನಂದ ಸರ್ಕಲ್ ರವರೆಗೆ ರೋಡ್ ಶೋ ನಡೆಸಲಿದ್ದಾರೆ. ನಂತರ ಒಟ್ಟು 8479 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 118 ಕಿ.ಮೀ ಉದ್ದದ ಮೈಸೂರು-ಬೆಂಗಳೂರು ದಶಪಥ ರಸ್ತೆಯನ್ನು ಹನಕೆರೆಯ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ.
ಮಧ್ಯಾಹ್ನ 12.15 ರಿಂದ 01.15 ರವರೆಗೆ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಂಡು ರೂ.4128.92 ಕೋಟಿ ವೆಚ್ಚದ ಒಟ್ಟು 92.33 ಕಿ.ಮೀ ಉದ್ದದ 4 ಪಥದ ಮೈಸೂರು – ಕುಶಾಲನಗರ 4 ಪ್ಯಾಕೇಜ್‌ಗಳ ಹೆದ್ದಾರಿ ಕಾಮಗಾರಿಗೆ ಭೂಮಿಪೂಜೆ ಮಾಡಲಿದ್ದಾರೆ.

Previous articleವಿದ್ಯುನ್ಮಾನ ಮತಯಂತ್ರ ಬಳಕೆ ಪ್ರಾತ್ಯಕ್ಷಿಕೆ
Next articleಹಂಪಿ ಕಟ್ಟಡ ಶೈಲಿಯಲ್ಲಿ ನಿರ್ಮಿತ ಹೊಸಪೇಟೆ ರೈಲು ನಿಲ್ದಾಣ ನಾಳೆ ಲೋಕಾರ್ಪಣೆ