ಬೈಕ್ ಅಪಘಾತದಲ್ಲಿ ಯುವಕ ಸಾವು

0
19
accident

ಇಳಕಲ್: ಇಲ್ಲಿನ ಜೋಶಿಗಲ್ಲಿ ಬಡಾವಣೆಯ ಸಾಗರ ನಿಟ್ಟಿಂಗ ವಕ್ಸ್೯ದ ಹತ್ತಿರ ಯುವಕನೊಬ್ಬ ಬೈಕ್ ಮೇಲೆ ರಾತ್ರಿಯ ಸಮಯದಲ್ಲಿ ಮನೆಗೆ ಹೋಗುತ್ತಿದ್ದಾಗ ವಿದ್ಯುತ್ ಕಂಬಕ್ಕೆ ಹಾಯ್ದು ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರದಂದು ನಡೆದಿದೆ. ೨೨ ವರ್ಷದ ಆದೇಶ ಈರಪ್ಪ ನಾಗೂರ ಎಂಬ ಯುವಕ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಹೋಗುವಾಗ ಆಯತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಾಗ ಅಲ್ಲಿಯೇ ಬಿದ್ದು ಸಾವನ್ನಪ್ಪಿದ್ದಾನೆ. ಶಹರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ ಐ ಕೃಷ್ಣವೇಣಿ ತನಿಖೆ ನಡೆಸಿದ್ದಾರೆ.

Previous articleಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ
Next articleಭಾಷೆಯ ರಕ್ಷಣೆ ಬಂದಾಗ ಎಲ್ಲರೂ ಒಗ್ಗಟ್ಟಾಗಿ