ಟ್ರಕ್-ಬಸ್‌ಗಳ ಮಧ್ಯೆ ಅಪಘಾತ: 10 ಜನ ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ

0
13
ಬಸ್‌

ಮೂರು ಬಸ್‌ಗಳಿಗೆ ಟ್ರಕ್‌ ಒಂದು ಡಿಕ್ಕಿ ಹೊಡೆದ ಪರಿಣಾಮ 10 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿರುವ 50ಕ್ಕೂ ಅಧಿಕ ಜನರು ಗಾಯಂಗೊಡ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿದೆ.
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ರ್ಯಾಲಿಗೆ ಬಂದಿದ್ದ ಬಸ್‌ಗಳು ವಾಪಸ್‌ ಆಗುತ್ತಿದ್ದವು. ಈ ವೇಳೆ ಬಸ್‌ ಚಾಲಕರು ಸುರಂಗ ಮಾರ್ಗದ ಬಳಿ ಬಸ್‌ಗಳನ್ನು ನಿಲ್ಲಿಸಿದ್ದಾರೆ. ಆಗ ಎದುರಿನಿಂದ ವೇಗವಾಗಿ ಬಂದ ಟ್ರಕ್‌ವೊಂದು ಬಸ್‌ಗೆ ಡಿಕ್ಕಿ ಹೊಡೆದಿದೆ. ಅಲ್ಲದೇ ಡಿಕ್ಕಿ ರಭಸಕ್ಕೆ ಒಂದು ಬಸ್‌ ಪಲ್ಟಿಯಾಗಿದ್ದು ಇನ್ನುಳಿದ ಬಸ್‌ಗಳು ಜಖಂಗೊಂಡಿವೆ.
ದುರ್ಘಟನೆ ಬಗ್ಗೆ ಮಧ್ಯಪ್ರದೇಶ ಸಿಎಂ ಶಿವರಾಜ್‌ ಚವ್ಹಾಣ ದುಃಖ ವ್ಯಕ್ತಪಡಿಸಿದ್ದು ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ 2ಲಕ್ಷ ರೂ. ಮತ್ತು ಗಾಯಾಳುಗಳಿಗೆ 1 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

Previous articleಬಿತ್ತನೆ ಬೀಜದ ಹಣ ದುರುಪಯೋಗ: ಕೃಷಿ ಅಧಿಕಾರಿ ರಾಘವೇಂದ್ರ ಅಮಾನತು
Next articleಮಾರ್ಚ್‌ 1ರಿಂದ ಸರಕಾರಿ ನೌಕರರ ಮುಷ್ಕರ