SK Home Ad
Home ಸಿನಿ ಮಿಲ್ಸ್ ಸತ್ಯ ಸನ್‌ ಆಫ್‌ ಹರಿಶ್ಚಂದ್ರ ಚಿತ್ರದಲ್ಲಿ ಶಿವರಾಜ್‌ಕುಮಾರ್ ಅತಿಥಿ ಪಾತ್ರ: ನಿರೂಪ್ ಭಂಡಾರಿಗೆ ಕರುನಾಡ ಚಕ್ರವರ್ತಿ...

ಸತ್ಯ ಸನ್‌ ಆಫ್‌ ಹರಿಶ್ಚಂದ್ರ ಚಿತ್ರದಲ್ಲಿ ಶಿವರಾಜ್‌ಕುಮಾರ್ ಅತಿಥಿ ಪಾತ್ರ: ನಿರೂಪ್ ಭಂಡಾರಿಗೆ ಕರುನಾಡ ಚಕ್ರವರ್ತಿ ಸಾಥ್

0
34

ಬೆಂಗಳೂರು: ನಟ ನಿರೂಪ್‌ ಭಂಡಾರಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ಸಿನಿಮಾಗೆ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ವಿಶೇಷ ಅತಿಥಿ ಪಾತ್ರದ ಮೂಲಕ ಸಾಥ್ ನೀಡಿದ್ದಾರೆ. ಶಿವಣ್ಣ ಅವರ ಈ ಗ್ರ್ಯಾಂಡ್ ಎಂಟ್ರಿಯಿಂದಾಗಿ ಚಿತ್ರದ ಮೇಲಿನ ನಿರೀಕ್ಷೆಗಳು ದುಪ್ಪಟ್ಟಾಗಿವೆ. ತಮ್ಮ ಪಾತ್ರದ ಕುರಿತು ಮಾತನಾಡಿರುವ ಶಿವರಾಜ್‌ಕುಮಾರ್, ನಿರೂಪ್, ಸಾಯಿಕುಮಾರ್ ಹಾಗೂ ವಿಶಿಷ್ಟ ಪಾತ್ರಕ್ಕಾಗಿಯೇ ಒಪ್ಪಿಕೊಂಡು ನಟಿಸಿದ್ದು, ಈ ಹೊಸ ಲುಕ್ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಯುವ ಪ್ರತಿಭೆ ಸಚಿನ್ ಆಕ್ಷನ್‌ ಕಟ್‌ ಹೇಳುತ್ತಿರುವ ಈ ಚಿತ್ರದಲ್ಲಿ ನಿರೂಪ್‌ ಜೊತೆಗೆ ಹಿರಿಯ ನಟ ಸಾಯಿಕುಮಾರ್, ಬೃಂದಾ ಆಚಾರ್ಯ ಹಾಗೂ ಅಂಕಿತಾ ಅಮರ್ ಪ್ರಮುಖ ತಾರಾಗಣದಲ್ಲಿದ್ದಾರೆ. ಇದೊಂದು ಪರಿಪೂರ್ಣ ಫ್ಯಾಮಿಲಿ ಎಂಟರ್‌ಟೇನರ್ ಆಗಿದ್ದು, ನಿರೂಪ್ ‘ಸತ್ಯ’ ಎಂಬ ಬುದ್ಧಿವಂತ ಯುವಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಂದೆ ‘ಹರಿಶ್ಚಂದ್ರ’ನ ಪಾತ್ರಕ್ಕೆ ಸಾಯಿಕುಮಾರ್ ಜೀವ ತುಂಬಿದ್ದಾರೆ. ತೀರ್ಥಹಳ್ಳಿ ಮತ್ತು ಚನ್ನಗಿರಿ ಸೇರಿದಂತೆ ಮಲೆನಾಡಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಚಿತ್ರದ ಮೊದಲಾರ್ಧ ಸಂಪೂರ್ಣ ಹಾಸ್ಯಮಯವಾಗಿದ್ದು, ದ್ವಿತೀಯಾರ್ಧದಲ್ಲಿ ಸಾಮಾಜಿಕ ಕಾಳಜಿಯ ವಿಷಯದ ಜೊತೆಗೆ ಸಣ್ಣ ಕೋರ್ಟ್‌ ರೂಮ್‌ ಡ್ರಾಮಾ ಇರಲಿದೆ. ವಿಶೇಷವೆಂದರೆ ನಿರೂಪ್‌ ಭಂಡಾರಿ ಅವರೇ ಈ ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಅಂಕಿತ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಅಂಕಿತ್ ಸೋನಿಗಾರ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಹಾಗೂ ಸಂದೀಪ್ ವಲ್ಲೂರಿ ಛಾಯಾಗ್ರಹಣವಿದೆ.