ಜೆಡಿಎಸ್ ಜಿಲ್ಲಾಧ್ಯಕ್ಷರ ಕಾರು ಅಪಘಾತ: ಮೂವರು ಗಂಭೀರ

0
106
Accident

ಕಾರವಾರ: ಕಾರು-ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅಪಘಾತದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ರಾಷ್ಟ್ರೀಯ ಹೆದ್ದಾರಿ 66ರ ಹಿರೇಗುತ್ತಿ ಬಳಿ ನಡೆದಿದೆ.
ಅಂಕೋಲಾದಿಂದ ಹೊನ್ನಾವರ ಕಡೆ ತೆರಳುತ್ತಿದ್ದ ಕಾರಿನಲ್ಲಿದ್ದ ಜೆಡಿಎಸ್‌ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ, ವಿ.ಎಂ.ಭಂಡಾರಿ, ಪರಮೇಶ್ವರ ನಾಯ್ಕ ಮೂವರು ಗಂಭೀರವಾಗಿ ಗಾಯಗೊಂಡಿದ್ದು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಮಹದಾಯಿ ಪ್ರಾಧಿಕಾರ ರಚನೆ, ರೈತರ ಹರ್ಷ
Next articleಧಾರವಾಡ ಬಳಿ ಭೀಕರ ಅಪಘಾತ: ಐವರ ಸಾವು